ಭಾನುವಾರ, ಡಿಸೆಂಬರ್ 15, 2019
25 °C

ಪ್ರಿಯಾಂಕಾ ಹೊರಗೆಡಹಿದ ಸತ್ಯ ಏನು ಗೊತ್ತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಿಯಾಂಕಾ ಹೊರಗೆಡಹಿದ ಸತ್ಯ ಏನು ಗೊತ್ತೇ?

ಸಿನಿಮಾ ಮತ್ತು ಕಿರುತೆರೆಯಲ್ಲಿ ಜಾಗತಿಕ ಮಟ್ಟದಲ್ಲಿ ತಮ್ಮದೇ ನೆಲೆ ಕಂಡುಕೊಂಡಿರುವ ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಕೂಡಾ ‌ ವರ್ಣ ತಾರತಮ್ಯ ನೀತಿ ಅನುಭವಿಸಿದ್ದರಂತೆ. ಈ ಸಂಗತಿಯನ್ನು ಸ್ವತಃ ‘ಪಿಗ್ಗಿ’ಯೇ ತಡವಾಗಿ ಬಾಯಿಬಿಟ್ಟಿದ್ದಾರೆ.

‘ಭಾರತದಲ್ಲೇ ಇರಲಿ, ಅಮೆರಿಕದಲ್ಲೇ ಇರಲಿ ನಟರು ಮತ್ತು ನಟಿಯರ ನಡುವೆ ಸಂಭಾವನೆಯಲ್ಲಿ ತಾರತಮ್ಯ ನಡೆಯುತ್ತಲೇ ಇರುತ್ತದೆ. ದೊಡ್ಡ ನಟರ ಜೊತೆ ಅಭಿನಯಿಸುವಾಗಲಂತೂ ಸಂಭಾವನೆಯ ಅಂತರ ಗಮನಾರ್ಹವಾಗಿರುತ್ತದೆ. ಅಂತಹ ಸಂದರ್ಭ ಎದುರಾದಾಗ ನನ್ನ ಸಂಭಾವನೆಯ ಬಗ್ಗೆ ಚೌಕಾಶಿ ಮಾಡುವಂತೆ ನನ್ನ ಸಿಬ್ಬಂದಿಗೆ ‌ತಿಳಿಸುತ್ತೇನೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.‘ಕಳೆದ ವರ್ಷ ನಿಗದಿಯಾಗಿದ್ದ ಚಿತ್ರೀಕರಣವೊಂದಕ್ಕೆ ತೆರಳಿದಾಗ ಸ್ಟುಡಿಯೊ ಎಕ್ಸಿಕ್ಯೂಟಿವ್‌ ನನ್ನ ಸಹಾಯಕನ ಜೊತೆ ‘ಆಕೆಯ ದೈಹಿಕ ಸ್ವರೂಪ ಸರಿಯಿಲ್ಲ. ಶೀ ಹ್ಯಾಸ್‌ ಬ್ಯಾಡ್‌ ಫಿಸಿಕಾಲಿಟಿ’ ಎಂದು ಮೂದಲಿಸಿದ್ದ. ಅವನ ಮಾತಿನ ಅರ್ಥವೇನೆಂದು ನನ್ನ ಸಹಾಯಕ ನನಗೆ ತಿಳಿಸಿದಾಗಲೇ ಗೊತ್ತಾಗಿದ್ದು, ಆ ಸ್ಟುಡಿಯೊದವರಿಗೆ ಕಪ್ಪು ಬಣ್ಣದವರು ಬೇಕಿರಲಿಲ್ಲ ಎಂದು. ನಿಮ್ಮ ಚರ್ಮದ ಬಣ್ಣ ಬದಲಿಸಲು ನೀವು ಏನಾದರು ಮಾಡಲೇಬೇಕು ಎಂದು ನನ್ನ ಸಹಾಯಕ ಸಲಹೆ ನೀಡಿದ. ನನಗೂ ಹಾಗೇ ಅನಿಸಿತು’ ಎಂಬ ಸಂಗತಿಯನ್ನೂ ಪ್ರಿಯಾಂಕಾ ಬಹಿರಂಗಪಡಿಸಿದ್ದಾರೆ.

ಅಮೆರಿಕದ ಕಿರುತೆರೆಯಲ್ಲಿ ಬಹುಶ್ರುತ ಶೋ ‘ಕ್ವಾಂಟಿಕೊ’ದ ಹೊಸ ಆವೃತ್ತಿ ಇನ್ನೇನು ಶುರುವಾಗಲಿದೆ ಎಂಬ ಈ ಹಂತದಲ್ಲಿ ಪ್ರಿಯಾಂಕಾ ಚೋಪ್ರಾ ಬಹಿರಂಗಪಡಿಸಿರುವ ವರ್ಣ ತಾರತಮ್ಯದ ಸುದ್ದಿ ಇನ್ನು ಯಾವ ಬಣ್ಣ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.  v

ಪ್ರತಿಕ್ರಿಯಿಸಿ (+)