ನಗರದ ವಿವಿಧೆಡೆ ವಾಹನ ಕಳವು: ಬಂಧನ

7

ನಗರದ ವಿವಿಧೆಡೆ ವಾಹನ ಕಳವು: ಬಂಧನ

Published:
Updated:

ಬೆಂಗಳೂರು: ನಗರದ ವಿವಿಧೆಡೆಯಿಂದ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಕಳ್ಳರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದು, ಅವರಿಂದ ಕಾರು, ಎರಡು ಆಟೊರಿಕ್ಷಾ, 17 ಬೈಕ್‌ ಸೇರಿ 20 ವಾಹನ ಮತ್ತು 3 ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಕೆ.ಆರ್‌. ಮಾರುಕಟ್ಟೆ ಸಂಕೀರ್ಣ ಸಮೀಪದ ನಿವಾಸಿ ಪ್ರಶಾಂತ ಮೂರ್ತಿ (19), ಕೊತ್ತನೂರು ದಿಣ್ಣೆಯ ಗಣೇಶ ದೇವಸ್ಥಾನ ಸಮೀಪದ ನಿವಾಸಿ ಪ್ರಮೋದ್‌ ಮುನಿರಾಜ್‌ (19), ಆನೇಕಲ್‌ನ ಬಿದರಗೆರೆ ಗ್ರಾಮದ ನಿವಾಸಿ ಅಭಿಷೇಕ್‌ ತಿಮ್ಮರಾಯಪ್ಪ (22) ಬಂಧಿತರು.

ಕೋಣನಕುಂಟೆ, ಪುಟ್ಟೇಣಹಳ್ಳಿ, ಮೈಕೋ ಲೇಔಟ್‌, ಬ್ಯಾಟರಾಯನಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ಪ್ರದೇಶಗಳಿಂದ ಆರೋಪಿಗಳು ಬೈಕ್‌, ಆಟೊ ರಿಕ್ಷಾ ಹಾಗೂ ಕಾರು ಕಳವು ಮಾಡಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪ

ಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry