ಗುರುವಾರ , ಜೂನ್ 4, 2020
27 °C

ಉನ್ನಾವ್ ಅತ್ಯಾಚಾರ ಪ್ರಕರಣ: ಶಾಸಕ ಕುಲದೀಪ್ ಸೆಂಗರ್ ವಿರುದ್ಧ ಎಫ್‌ಐಆರ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಉನ್ನಾವ್ ಅತ್ಯಾಚಾರ ಪ್ರಕರಣ: ಶಾಸಕ ಕುಲದೀಪ್ ಸೆಂಗರ್ ವಿರುದ್ಧ ಎಫ್‌ಐಆರ್

ಉನ್ನಾವ್/ಉತ್ತರಪ್ರದೇಶ: ಅತ್ಯಾಚಾರ ಆರೋಪ ಮತ್ತು ಸಂತ್ರಸ್ಥೆಯ ತಂದೆಯ ಸಾವಿನ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ.

ಭಾರತೀಯ ದಂಡ ಸಂಹಿತೆ 366(ಮಹಿಳೆಯ ಅಪಹರಣ), 363 (ಅಪಹರಣ), 376(ಅತ್ಯಾಚಾರ) ಮತ್ತು 506(ಅಪರಾಧಿ ಬೆದರಿಕೆ) ಸೆಕ್ಷನ್ ಹಾಗೂ ಪೋಕ್ಸೋ ಕಾಯ್ದೆ  ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದುವರೆಗೂ ಯಾರು ಕುಲದೀಪ್ ಅವರ ರಕ್ಷಣೆಗೆ ಮುಂದೆ ಬಂದಿಲ್ಲ. ಎರಡೂ ಕಡೆಯೂ ಪೂರ್ವಪರ ವಿಚಾರಣೆ ನಡೆಸಲಾಗುತ್ತದೆ. ಇದೀಗ ಸಿಬಿಐ ತನಿಖೆ ಒಪ್ಪಿಸಲಾಗಿದೆ. ಅವರ ಬಂಧನದ ಬಗ್ಗೆ ಸಿಬಿಐ ನಿರ್ಧಾರ ಮಾಡಲಿದೆ ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಮಾರ್ ಹೇಳಿದ್ದಾರೆ. 

ನ್ಯಾಯಾಂಗ ಬಂಧನದಲ್ಲಿರುವಾಗಲೇ ಮೃತಪಟ್ಟ ಸಂತ್ರಸ್ಥೆಯ ತಂದೆಯ ಪ್ರಕರಣವನ್ನು ಎಸ್‌ಐಟಿ ತನಿಖೆ ಕೈಗೊಂಡಿತ್ತು. ಅಲ್ಲದೇ ಸಂತ್ರಸ್ತೆಯ ತಂದೆ ಮೃತಪಡುವ ಮುನ್ನ ಹೇಳಿಕೆ ನೀಡಿದ್ದ ವಿಡಿಯೊ ವೈರಲ್ ಆಗುತ್ತಿದ್ದಂತೆ ಈ ಬೆಳವಣಿಗೆ ನಡೆದಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಂತ್ರಸ್ಥೆ ಚಿಕ್ಕಪ್ಪ, ‘ಶಾಸಕ ಕುಲದೀಪ್ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಕ್ಕೆ ಖುಷಿಯಾಗಿದೆ. ಈ ಕೆಲಸವನ್ನು ಮೊದಲೇ ಮಾಡಬೇಕಾಗಿತ್ತು. ಇದೀಗ ನನ್ನ ಅಣ್ಣನ ಸಾವಿಗೆ ಬೆಲೆ ಸಿಕ್ಕಂತಾಗಿದೆ. ಆದರೆ ಅವರನ್ನು ಬಂಧನಕ್ಕೊಳಪಡಿಸುತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ’ ಎಂದು ಹೇಳಿದ್ದಾರೆ.

ಆತ್ಯಾಚಾರ ಸಂಬಂಧ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಅವರ ಮನೆಯ ಮುಂದೆ ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸಿತ್ತು.

Unnao (Uttar Pradesh) [India], Apr 12 (ANI): An FIR was registered against Bharatiya Janata Party (BJP) MLA Kuldeep Singh Sengar, on Thursday, the Police Station Officer (SO) Rajesh Singh confirmed.

The FIR was registered under sections 363 (kidnapping), 366 (abduction of woman), 376 (rape),506 (criminal intimidation) of the IPC and Protection of Children from Sexual Offences (POCSO) Act.

This comes after an SIT probe was initiated into the case following the custodial death of rape victim's father.

The uncle of the victim expressed happiness, saying, "Yes we are happy that finally an FIR has been registered against Kuldeep Singh Sengar; had this been done much earlier, my brother (victim's father) would be alive today. Still, let us see if he will be arrested or not."

On Sunday, the victim, along with her family members, had tried to commit suicide in front of Uttar Pradesh Chief Minister Yogi Adityanath's residence in Lucknow, alleging that she was raped by Singh Sengar and his fellow accomplices.

Later, the rape victim's father was arrested, and on Monday, he died in hospital. However, the family cried foul alleging that he was murdered.

On Tuesday, the MLA's brother Atul Singh, along with three others, was arrested from Unnao on the directions of the Uttar Pradesh Director General of Police (DGP) DGP, by the Lucknow crime branch team.

The victim's family had alleged that the accused MLA's brother had thrashed the victim's father on April 3 for refusing to withdraw the FIR over the rape.

As many as six police personnel were also suspended for allegedly beating up the victim's father.

The accused BJP MLA on Monday refused to resign from his post following the allegations of rape against him. He further went on to dismiss the entire incident saying the allegations were completely wrong. (ANI)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.