ಮಂಗಳವಾರ, ಆಗಸ್ಟ್ 4, 2020
25 °C

ಕಾಮನ್‌ವೆಲ್ತ್‌: ಕುಸ್ತಿಪಟು ರಾಹುಲ್‌, ಸುಶೀಲ್‌ಗೆ ಚಿನ್ನ; ಬೆಳ್ಳಿಗೆದ್ದ ಬಬಿತಾ; ಕಿರಣ್‌ಗೆ ಕಂಚು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಾಮನ್‌ವೆಲ್ತ್‌: ಕುಸ್ತಿಪಟು ರಾಹುಲ್‌, ಸುಶೀಲ್‌ಗೆ ಚಿನ್ನ; ಬೆಳ್ಳಿಗೆದ್ದ ಬಬಿತಾ; ಕಿರಣ್‌ಗೆ ಕಂಚು

ಗೋಲ್ಡ್‌ಕೋಸ್ಟ್‌ (ಆಸ್ಟ್ರೇಲಿಯಾ): ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಳುಗಳು ಗುರವಾರವೂ ಸಹ ಪದಕಗಳ ಬೇಟೆಯನ್ನು ಮುಂದುವರಿಸಿದ್ದಾರೆ.

ಪುರುಷರ 57 ಕೆ.ಜಿ.ವಿಭಾಗದಲ್ಲಿ ಕುಸ್ತಿಪಟು ರಾಹುಲ್‌ ಅವಾರೆ ಚಿನ್ನದ ಪದಕ ಜಯಿಸಿದ್ದಾರೆ. ಕೆನಡಾದ ಸ್ಟಿವನ್‌ ತಕಹಷಿ ಅವರನ್ನು ರಾಹುಲ್‌ 15–7 ಪಾಯಿಂಟ್‌ಗಳಿಂದ ಸ್ಪರ್ಧೆಯಲ್ಲಿ ಮಣಿಸಿದರು.

ರಾಹುಲ್ ಈ ಹಿಂದೇ ಏಷಿಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಮತ್ತು 2011 ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲೂ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದರು.ಸುಶೀಲ್‌ಗೂ ಚಿನ್ನ : 74 ಕೆ.ಜಿ.ಪುರುಷರ ಫ್ರೀಸ್ಟೈಲ್‌ ಕುಸ್ತಿ ವಿಭಾಗದಲ್ಲಿ ಸುಶೀಲ್‌ ಕುಮಾರ್‌ ಸಹ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.

ಇವರು ಅಂತಿಮ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾದ ಜೊಹಾನ್ನೆಸ್‌ ಬೊಥಾ ಅವರನ್ನು ಮಣಿಸಿದರು. ಎದುರಾಳಿಯನ್ನು ಪಳಗಿಸಿದ ಪರಿಗೆ ಸುನೀಲ್‌ 10–0 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡರು.

ಸುಶೀಲ್‌ ಕುಮಾರ್‌ –ಪಿಟಿಐ ಚಿತ್ರ

ಚಿನ್ನದಿಂದ ವಂಚಿತಳಾದ ಬಬಿತಾ: 53 ಕೆ.ಜಿ. ಮಹಿಳಾ ಕುಸ್ತಿ ವಿಭಾಗದಲ್ಲಿ ಸೆಣಸಿದ ಬಬಿತಾ ಕುಮಾರಿ ಅಂತಿಮ ಹಣಾಹಣಿಯಲ್ಲಿ ಕೆನಡಾದ ಡಿಯಾನಾ ವೆಕರ್‌ ಎದುರು ಸೋತು ಬೆಳ್ಳಿ ಪದಕಕ್ಕೆ ತೃಪ್ತರಾದರು.

ಕೆನಡಾದ ಡಿಯಾನಾ ವೆಕರ್‌ಗೆ ಬಬಿತಾ ಕುಮಾರಿ ಹಾಕಿದ ಪಟ್ಟು –ಪಿಟಿಐ ಚಿತ್ರ

***

76 ಕೆ.ಜಿ. ಮಹಿಳೆಯರ ಕುಸ್ತಿ ವಿಭಾಗದಲ್ಲಿ ಕಿರಣ್‌ ಕಂಚಿನ ಪದಕ ಗಳಿಸಿದ್ದಾರೆ. ಮಾರಿಷಶ್‌ನ ಕಟೌಸ್ಕಿಯಾ ಪರಿಯಾದಾವೆನ್‌ ಅವರನ್ನು 10–0 ಪಾಯಿಂಟ್‌ಗಳಿಂದ ಇವರು ಮಣಿಸಿದರು.

ಕಟೌಸ್ಕಿಯಾ ಮಣಿಸಿದ ಕಿರಣ್‌ –ರಾಯಿಟರ್ಸ್‌ ಚಿತ್ರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.