ಬುಧವಾರ, ಜುಲೈ 15, 2020
22 °C

7 ಸಿಂಹಗಳನ್ನು ಬೆದರಿಸಿದ 1 ಮುಳ್ಳುಹಂದಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

7 ಸಿಂಹಗಳನ್ನು ಬೆದರಿಸಿದ 1 ಮುಳ್ಳುಹಂದಿ

ಲಿಂಪೊಪೊ (ದಕ್ಷಿಣ ಆಫ್ರಿಕಾ): ಒಂದೇ ಒಂದು ‘ಮುಳ್ಳುಹಂದಿ‘ ಕಾಡಿನ ರಾಜ ಖ್ಯಾತಿಯ ಏಳು ಸಿಂಹಗಳನ್ನು ಬೆದರಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಕ್ಷಿಣ ಆಫ್ರಿಕಾದ ಲಿಂಪೊಪೊ ನಗರದಿಂದ ಸುಮಾರು 300 ಕಿ.ಮೀಟರ್ ದೂರದಲ್ಲಿರುವ ಕ್ರೂಗೇರಾ ರಾಷ್ಟ್ರೀಯ ಉದ್ಯಾನವನದಲ್ಲಿ ಮುಳ್ಳುಹಂದಿಯೊಂದು ಸಿಂಹಗಳನ್ನು ಬೆದರಿಸಿದೆ. ಹೆನ್ನೆ ಬ್ರೆಕ್ಕರ್‌ ಎಂಬುವರು ರಾತ್ರಿ ಸಫಾರಿ ಸಮಯದಲ್ಲಿ ಮುಳ್ಳುಹಂದಿ ಸಿಂಹಗಳನ್ನು ಬೆದರಿಸುತ್ತಿರುವ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಬೇಟೆ ಸಿಕ್ಕಿದ ಖುಷಿಯಲ್ಲಿ 7 ಸಿಂಹಗಳು ಮುಳ್ಳುಹಂದಿಯನ್ನು ಹಿಂಬಾಲಿಸಿದವು. ಅವು ಏಕಕಾಲಕ್ಕೆ ದಾಳಿಗೆ ಮುಂದಾದವು. ಇದರ ಸುಳಿವರಿತ ಮುಳ್ಳುಹಂದಿ ಕೂಡಲೇ ಹರಿತವಾದ ಮುಳ್ಳುಗಳನ್ನು ಹೊರ ಹಾಕಿ ಸಿಂಹಗಳನ್ನು ಬೆದರಿಸಿತು. ಸಿಂಹಗಳು ಉಗುರಿನ ಮೂಲಕ ದಾಳಿ ಮಾಡಲು ಯತ್ನಿಸಿದರೂ ಮುಳ್ಳುಹಂದಿ ಮಾತ್ರ ಸಿಗಲಿಲ್ಲ. ಒಂದೆರಡು ನಿಮಿಷಗಳ ಕಾದಾಟದ ಬಳಿಕ ಸಿಂಹಗಳು ನಿರಾಸೆಯಿಂದ ಮತ್ತೆ ಕಾಡು ಸೇರಿದವು ಎಂದು ಹೆನ್ನೆ ಬ್ರೆಕ್ಕರ್‌ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.