ಕತ್ರೀನಾ ಪುಸ್ತಕ ‘ಬಾರ್ಬಿ ಡ್ರೀಮ್ಸ್‌

ಶುಕ್ರವಾರ, ಮಾರ್ಚ್ 22, 2019
28 °C

ಕತ್ರೀನಾ ಪುಸ್ತಕ ‘ಬಾರ್ಬಿ ಡ್ರೀಮ್ಸ್‌

Published:
Updated:
ಕತ್ರೀನಾ ಪುಸ್ತಕ ‘ಬಾರ್ಬಿ ಡ್ರೀಮ್ಸ್‌

ಬಾಲಿವುಡ್‌ ನಟಿ ಕತ್ರೀನಾ ಕೈಫ್‌ ಬರೆಯಲಿರುವ ಪುಸ್ತಕದ ಹೆಸರು ಮತ್ತು ಹೂರಣ ಕೊನೆಗೂ ಗೊತ್ತಾಗಿದೆ. ತಮ್ಮ ಬಾಲ್ಯ ಮತ್ತು ಪ್ರವಾಸಗಳ ಕುರಿತು ಪುಸ್ತಕವೊಂದನ್ನು ಬರೆಯುತ್ತಾರಂತೆ. ‘ಬಾರ್ಬಿ’ ಗೊಂಬೆ ನನಗೆ ಎಂದಿಗೂ ಸ್ಫೂರ್ತಿ. ಹಾಗಾಗಿ, ಪುಸ್ತಕಕ್ಕೆ ‘ಬಾರ್ಬಿ ಡ್ರೀಮ್ಸ್‌’ ಎನ್ನುವ ಹೆಸರಿಡುತ್ತೇನೆ ಎಂದು ಕತ್ರೀನಾ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಪುಸ್ತಕ ಪ್ರಕಾಶಕರೊಬ್ಬರ ಬಳಿ ಮಾತುಕತೆಯೂ ನಡೆದಿದ್ದು, ಶೀಘ್ರದಲ್ಲೇ ಪುಸ್ತಕ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ. ಆದರೆ, ಈ ಪುಸ್ತಕದಲ್ಲಿ ತಮ್ಮ ಆತ್ಮಚರಿತ್ರೆ ಇತ್ಯಾದಿ ಬರೆಯುವುದಿಲ್ಲ ಬದಲಾಗಿ ಬಾಲ್ಯ ಮತ್ತು ವಿವಿಧ ದೇಶಗಳ ತಮ್ಮ ಪ್ರಯಾಣದ ಕುರಿತು ವಿವರವಾಗಿ ಬರೆಯುವುದಾಗಿ ಕತ್ರೀನಾ ಕೈಫ್‌ ಹೇಳಿಕೊಂಡಿದ್ದಾರೆ.

'ಬಾರ್ಬಿ ಡ್ರೀಮ್ಸ್’ ತಮ್ಮ ವೈಯಕ್ತಿಕ ಜೀವನಕ್ಕಿಂತ ಸ್ಫೂರ್ತಿದಾಯಕ ಮಾಹಿತಿಗಳನ್ನು ಒಳಗೊಂಡಿರುತ್ತದೆ ಎಂದು ಕತ್ರೀನಾ ಹೇಳಿದ್ದಾರೆ. ‘ಬೂಮ್‌’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜತೆಗೆ ನಟಿಸುವ ಮೂಲಕ ಬಾಲಿವುಡ್ ಪ್ರವೇಶಿಸಿದ ಕತ್ರೀನಾ ಅಲ್ಲಿಂದ ಹದಿನೈದು ವರ್ಷಗಳ ಕಾಲ ನಿರಂತರವಾಗಿ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ.

ನಟ ಸಲ್ಮಾನ್ ಖಾನ್ ಮತ್ತು ರಣವೀರ್ ಕಪೂರ್ ಜತೆಗೆ ಕತ್ರೀನಾ ಹೆಸರು ಥಳಕು ಹಾಕಿಕೊಂಡಿತ್ತಾದರೂ ಈ ಬಗ್ಗೆ ಇದುವರೆಗೆ ಕತ್ರೀನಾ ಎಲ್ಲೂ ಮಾತನಾಡಿಲ್ಲ. ಹಾಗಾಗಿ, ಕತ್ರೀನಾ ಬರೆಯಲಿರುವ ಪುಸ್ತಕದಲ್ಲೇನಾದರೂ ಈ ಬಗ್ಗೆ ವಿವರಗಳು ಸಿಗಬಹುದಾ ಎಂಬುದು ಕೈಫ್ ಅಭಿಮಾನಿಗಳ ನಿರೀಕ್ಷೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry