ಬುಧವಾರ, ಡಿಸೆಂಬರ್ 11, 2019
26 °C

ಡಿಸ್ಕಸ್‌ ಥ್ರೋನಲ್ಲಿ ಸೀಮಾ ಪೂನಿಯಾಗೆ ಬೆಳ್ಳಿ, ನವಜೀತ್‌ ಧಿಲ್ಲೋನ್‌ಗೆ ಕಂಚು

Published:
Updated:
ಡಿಸ್ಕಸ್‌ ಥ್ರೋನಲ್ಲಿ ಸೀಮಾ ಪೂನಿಯಾಗೆ ಬೆಳ್ಳಿ, ನವಜೀತ್‌ ಧಿಲ್ಲೋನ್‌ಗೆ ಕಂಚು

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಸೀಮಾ ಪೂನಿಯಾ ಬೆಳ್ಳಿ ಪದಕವನ್ನು, ನವಜೀತ್‌ ಕೌರ್‌ ಧಿಲ್ಲೋನ್‌ ಕಂಚಿನ ಪದಕ ಗಳಿಸಿದ್ದಾರೆ.

ಇಲ್ಲಿ ಗುರುವಾರ ನಡೆದ ಅಥ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಇಬ್ಬರು ಭಾರತಿಯ ಮಹಿಳಾ ಕ್ರೀಡಾಪಟುಗಳು ಈ ಸಾಧನೆ ತೋರಿದ್ದಾರೆ.

ಸೀಮಾ ಪೂನಿಯಾ ಅವರು 60.41 ಮೀಟರ್‌ ದೂರ ಡಿಸ್ಕಸ್‌ ಎಸೆಯುವ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಡಲ್ಲಿ ನಾಲ್ಕನೇಬಾರಿಗೆ ಪದಕ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದರು.

ನವಜೀತ್‌ ಧಿಲ್ಲೋನ್ ಅವರು 57.43 ಮೀಟರ್‌ ದೂರ ಡಿಸ್ಕರ್‌ ಎಸೆಯುವ ಮೂಲಕ ಕಂಚಿನ ಪದಕವನ್ನು ಗೆದ್ದರು.

34 ವರ್ಷ ವಯಸ್ಸಿನ ಸೀಮಾ ಪೂನಿಯಾ ಅವರು ಎರಡನೇ ಸುತ್ತಿನಲ್ಲಿ 59.57 ಮೀ, ಮೂರನೇ ಮತ್ತು ಐದನೇ ಸುತ್ತಿನಲ್ಲಿ ಕ್ರಮವಾಗಿ 58.54 ಮೀ ಹಾಗೂ ಅಂತಿಮ ಎಸೆತದಲ್ಲಿ 58.90 ಮೀ ದೂರ ಡಿಸ್ಕಸ್‌ ಎಸೆದರು.

ಪೂನಿಯಾ ಅವರು ಕಳೆದ ತಿಂಗಳು ನಡೆದಿದ್ದ ಫೆಡರೇಷನ್‌ ಕಪ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಾಗ 61.05 ಮೀ. ದೂರಕ್ಕೆ ಡಿಸ್ಕಸ್‌ ಎಸೆದಿದ್ದರು. ಅವರ ವೈಯಕ್ತಿಯ ದಾಖಲೆ 64.84 ಮೀ. ಇದ್ದು, ಇದು 2004ರಲ್ಲಿ ತೋರಿದ ಸಾಧನೆಯಾಗಿದೆ.

ಸೀಮಾ ಪುನಿಯಾ ಅವರು 2006 ಮೆಲ್ಬರ್ನ್‌ನ್‌ ಕೂಟದಲ್ಲಿ ಬೆಳ್ಳಿ, ಬಳಿಕ 2010ರಲ್ಲಿ ಬೆಳ್ಳಿ, 2014ರಲ್ಲಿ ಕಂಚಿನ ಪದಕಗಳನ್ನು ದೇಶಕ್ಕೆ ಗೆದ್ದುಕೊಟ್ಟಿದ್ದಾರೆ.

ಮಾಜಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾದ ಡ್ಯಾನಿ ಸ್ಟೀವನ್ಸ್ 68.26 ಮೀಟರ್‌ ದೂರದ ಅತ್ಯುತ್ತಮ ಎಸೆತದೊಂದಿಗೆ ಇಂದು ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು.

ಸೀಮಾ ಪೂನಿಯಾ ಅವರು ಡಿಸ್ಕಸ್‌ ಎಸೆದ ಪರಿ –ಎಎಫ್‌ಪಿ ಚಿತ್ರ

ನವಜೀತ್‌ ಧಿಲ್ಲೋನ್ ಅವರು ಡಿಸ್ಕಸ್‌ ಎಸೆದ ಪರಿ –ಎಎಫ್‌ಪಿ ಚಿತ್ರ

ಪ್ರತಿಕ್ರಿಯಿಸಿ (+)