ಲಿಂಪೊಪೊ (ದಕ್ಷಿಣ ಆಫ್ರಿಕಾ): ‘ಕಾಡಿನ ರಾಜ’ ಖ್ಯಾತಿಯ ಏಳು ಸಿಂಹಗಳನ್ನು ‘ಮುಳ್ಳುಹಂದಿ’ಯೊಂದು ಬೆದರಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಕ್ಷಿಣ ಆಫ್ರಿಕಾದ ಲಿಂಪೊಪೊ ನಗರದಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಕ್ರೂಗೇರಾ ರಾಷ್ಟ್ರೀಯ ಉದ್ಯಾನದಲ್ಲಿ ಮುಳ್ಳುಹಂದಿಯೊಂದು ಸಿಂಹಗಳನ್ನು ಬೆದರಿಸಿದೆ. ಹೆನ್ನೆ ಬ್ರೆಕ್ಕರ್ ಅವರು ರಾತ್ರಿ ಸಫಾರಿ ಸಮಯದಲ್ಲಿ ಮುಳ್ಳುಹಂದಿ ಸಿಂಹಗಳನ್ನು ಬೆದರಿಸುತ್ತಿರುವ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಕುರಿತು ಸ್ಕ್ರಾಲ್ ಡಾಟ್ ಇನ್ (scroll.in) ವರದಿ ಮಾಡಿದೆ.

ಬೇಟೆಯಾಡುವ ಖುಷಿಯಲ್ಲಿ ಏಳು ಸಿಂಹಗಳು ಮುಳ್ಳುಹಂದಿಯನ್ನು ಹಿಂಬಾಲಿಸಿದವು. ಸುಳಿವು ಅರಿತ ಮುಳ್ಳುಹಂದಿ ಕೂಡಲೇ ಹರಿತವಾದ ಮುಳ್ಳುಗಳನ್ನು ಹೊರ ಹಾಕಿ ಸಿಂಹಗಳನ್ನು ಬೆದರಿಸಿತು. ಸಿಂಹಗಳು ಉಗುರಿನ ಮೂಲಕ ದಾಳಿ ಮಾಡಲು ಯತ್ನಿಸಿದರೂ ಮುಳ್ಳುಹಂದಿ ಸಿಗಲಿಲ್ಲ. ಒಂದೆರಡು ನಿಮಿಷಗಳ ಕಾದಾಟದ ಬಳಿಕ ಸಿಂಹಗಳು ನಿರಾಸೆಯಿಂದ ಮತ್ತೆ ಕಾಡು ಸೇರಿದವು ಎಂದು ಹೆನ್ನೆ ಬ್ರೆಕ್ಕರ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.