7

64ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ: ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಕನ್ನಡದ 'ಹೆಬ್ಬೆಟ್ಟು ರಾಮಕ್ಕ’ ಅತ್ಯುತ್ತಮ ಚಿತ್ರ

Published:
Updated:
64ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ: ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಕನ್ನಡದ 'ಹೆಬ್ಬೆಟ್ಟು ರಾಮಕ್ಕ’ ಅತ್ಯುತ್ತಮ ಚಿತ್ರ

ನವದೆಹಲಿ: 64ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದ್ದು, ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಕನ್ನಡದ 'ಹೆಬ್ಬೆಟ್ಟು ರಾಮಕ್ಕ’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ಉತ್ತಮ ತುಳು ಸಿನಿಮಾ ಪ್ರಶಸ್ತಿಗೆ ’ಪಡ್ಡಾಯಿ’ ಭಾಜನವಾಗಿದೆ. ಈ ಸಿನಿಮಾವನ್ನು ಅಭಯ್ ಸಿಂಹ ನಿರ್ದೇಶನ ಮಾಡಿದ್ದಾರೆ. ನಿತ್ಯಾನಂದ ಪೈ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಇತ್ತೀಚೆಗೆ ನಿಧನರಾದ ಶ್ರೀದೇವಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಡೆದಿದ್ದಾರೆ. ಬಂಗಾಳದ ರೀದಿ ಸೇನ್‌ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.  ತೆಲುಗಿನ ಬಾಹುಬಲಿ–2 ಸಿನಿಮಾ ಜನಪ್ರಿಯ ಸಿನಿಮಾ ಪ್ರಶಸ್ತಿ ಪಡೆದು ಕೊಂಡಿದೆ.

ಪ್ರಾದೇಶಿಕ ಭಾಷೆಗಳ ವಿಭಾಗದ ಅತ್ಯುತ್ತಮ ಚಿತ್ರಗಳ ಪ್ರಶಸ್ತಿ:  ಬಂಗಾಳಿಯ ಮಯೂರಾಕ್ಷಿ, ಅಸ್ಸಾಮಿಯ ಈಶೂ, ತಮಿಳಿನ ಟು ಲೆಟ್‌, ತೆಲುಗಿನ ಘಾಜಿ, ಗುಜರಾತಿಯ ಧಾ, ಮರಾಠಿಯ ಕಚ್ಛಲಿಂಬೂ ಸಿನಿಮಾಗಳು ಆಯ್ಕೆಯಾಗಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry