ಅಹಮದಾಬಾದ್: ಬಿಜೆಪಿ ಸಂಸದರ ವಿರುದ್ಧ ಘೋಷಣೆ ಕೂಗಿದ ದಲಿತ ಮುಖಂಡರ ಬಂಧನ

ಮಂಗಳವಾರ, ಮಾರ್ಚ್ 19, 2019
28 °C

ಅಹಮದಾಬಾದ್: ಬಿಜೆಪಿ ಸಂಸದರ ವಿರುದ್ಧ ಘೋಷಣೆ ಕೂಗಿದ ದಲಿತ ಮುಖಂಡರ ಬಂಧನ

Published:
Updated:
ಅಹಮದಾಬಾದ್: ಬಿಜೆಪಿ ಸಂಸದರ ವಿರುದ್ಧ ಘೋಷಣೆ ಕೂಗಿದ ದಲಿತ ಮುಖಂಡರ ಬಂಧನ

ಅಹಮದಾಬಾದ್(ಗುಜರಾತ್‌): ಇಲ್ಲಿನ ಸಾರಂಗ್‌ಪುರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರ ವಿರುದ್ಧ ಪ್ರತಿಭಟನೆಯ ಘೋಷಣೆ ಕೂಗಿದ ಐವರನ್ನು ಪೊಲೀಸರು ಬಂಧಿಸಿದರು.

‘ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಂದ ಬಿಜೆಪಿ ಸಂಸದರ ವಿರುದ್ಧ ಕೆಲವು ದಲಿತ ಮುಖಂಡರು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಪರಿಸ್ಥಿತಿ ಕೈಮೀರಿ ಹೋಗದಂತೆ ತಡೆಯಲು ಐವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಮುಖಂಡರು ಅಂಬೇಡ್ಕರ್‌ ಪ್ರತಿಮೆಗೆ ಹಾರ ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿದ ಸುಭೋದ್ ಪರ್ಮಾರ್, ಭರತ್ ಶಾ, ಜಗದೀಶ್ ಚವ್ಡಾ, ಆದಿವಾಸಿ ಮುಖಂಡ ರಾಜು ವಾಲ್ವಾಯ್ಕರ್ ಮತ್ತು ದಲಿತ ಫ್ಯಾಂಥರ್‌ ಸಘಂಟನೆಯ ಬಿಪಿನ್ ರಾಯ್ ಅವರನ್ನು ಬಂಧಿಸಿ, ಕಾಲುಪುರ್‌ ಠಾಣೆಯಲ್ಲಿ ಇರಿಸಿದ್ದಾರೆ ಎಂದು ಗುಜರಾತ್‌ನ ವಡಗಾಂ ಕ್ಷೇತ್ರದ ಶಾಸಕ ಜಿಗ್ನೇಶ್‌ ಮೇವಾನಿ ಅವರು ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry