ಸೋಮವಾರ, ಆಗಸ್ಟ್ 10, 2020
26 °C

ಸಂವಿಧಾನ ಇಲ್ಲದೇ ಹೋಗಿದ್ದರೆ ಹಳ್ಳಿಯಲ್ಲಿ ದನ–ಕುರಿ ಮೇಯಿಸುತ್ತಾ ಉಳಿಯುತ್ತಿದ್ದೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂವಿಧಾನ ಇಲ್ಲದೇ ಹೋಗಿದ್ದರೆ ಹಳ್ಳಿಯಲ್ಲಿ ದನ–ಕುರಿ ಮೇಯಿಸುತ್ತಾ ಉಳಿಯುತ್ತಿದ್ದೆ: ಸಿದ್ದರಾಮಯ್ಯ

ಬೆಂಗಳೂರು: ‘ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಇಲ್ಲದೇ ಹೋಗಿದ್ದರೆ ನಾನು ಹಳ್ಳಿಯಲ್ಲಿ ದನ–ಕುರಿ ಮೇಯಿಸುತ್ತಾ ಉಳಿದುಬಿಡುತ್ತಿದ್ದೆನೋ ಏನೋ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಸಂವಿಧಾನ ರಕ್ಷಣೆಗೆ ಪಣ ತೊಡಲು ಕರೆ ನೀಡಿದ್ದಾರೆ.

‘ನನ್ನಲ್ಲಿ ಸಾಮಾಜಿಕ ನ್ಯಾಯದ ಬದ್ಧತೆ, ಹೋರಾಟದ ಕಿಚ್ಚು ಮತ್ತು ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸಿದ್ದು ಅಂಬೇಡ್ಕರ್. ನನ್ನ ರಾಜಕೀಯ ಬದುಕು, ಅಂಬೇಡ್ಕರ್ ಚಿಂತನೆಯ ಫಲ’ ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಡಾ. ಅಂಬೇಡ್ಕರ್ ರಚಿಸಿರುವ ಸಂವಿಧಾನದ ರಕ್ಷಣೆಗೆ ಪಣತೊಡೋಣ. ಅದೇರೀತಿ ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಪಟ್ಟಭದ್ರ ಶಕ್ತಿಗಳ ವಿರುದ್ಧದ ಹೋರಾಟವನ್ನು ಜತೆಗೂಡಿ ಮಾಡೋಣ’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಅವರು ಕರೆ ನೀಡಿದ್ದಾರೆ.

‘ಬಾಬಾಸಾಹೇಬ್ ಅಂಬೇಡ್ಕರ್ ಸಾಮಾಜಿಕ ನ್ಯಾಯದ ಹರಿಕಾರ. ಅನ್ಯಾಯ, ಅಸಮಾನತೆ ಮತ್ತು ಶೋಷಣೆಯ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿ. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಂತ್ರಗಳನ್ನು  ಶೋಷಿತವರ್ಗಕ್ಕೆ ನೀಡಿದ ಯುಗಪುರುಷ. ಈ ಕಾರಣಕ್ಕಾಗಿಯೇ ಇಂದು ಜಗತ್ತು ಅಂಬೇಡ್ಕರ್ ಅವರಿಗೆ ತಲೆಬಾಗುತ್ತಿದೆ. #DrAmbedkarbirthAnniversary #socialjustice’ ಎಂದು ಅಂಬೇಡ್ಕರ್ ಅವರನ್ನು ಸಿದ್ದರಾಮಯ್ಯ ಕೊಂಡಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.