ಶುಕ್ರವಾರ, ಡಿಸೆಂಬರ್ 6, 2019
25 °C

ಕುಸ್ತಿ: ಸುಮಿತ್‌ ಮಲಿಕ್‌, ಮಹಿಳಾ ಕುಸ್ತಿಪಟು ವಿನೇಶಾ ಪೋಗಟ್‌ಗೆ ಚಿನ್ನ

Published:
Updated:
ಕುಸ್ತಿ: ಸುಮಿತ್‌ ಮಲಿಕ್‌, ಮಹಿಳಾ ಕುಸ್ತಿಪಟು ವಿನೇಶಾ ಪೋಗಟ್‌ಗೆ ಚಿನ್ನ

ಗೋಲ್ಡ್‌ ಕೋಸ್ಟ್‌: ಭಾರತದ ಕ್ರೀಡಾಪಟುಗಳು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪಾರಮ್ಯ ಮೆರೆಯುತ್ತಿದ್ದು, ಶನಿವಾರ ಎರಡು ಚಿನ್ನ ಗೆದ್ದಿದ್ದಾರೆ.

ಮಹಿಳೆಯರ 50 ಕೆ.ಜಿ. ಫ್ರೀಸ್ಟೈಲ್‌ ಕುಸ್ತಿ ಪಂದ್ಯಾವಳಿಯಲ್ಲಿ ಭಾರತದ ವಿನೇಶಾ ಪೋಗಟ್‌ ಅವರು ಎದುರಾಳಿಯನ್ನು ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದರು.

ಪುರುಷರ 125 ಕೆ.ಜಿ. ಫ್ರೀಸ್ಟೈಲ್‌ ವಿಭಾಗದ ಫೈನಲ್‌ನಲ್ಲಿ ನೈಜೀರಿಯಾದ ಸಿನಿವಿ ಬೋಲ್ಟಿಕ್‌ ಅವರು ಗಾಯದ ಕಾರಣ ಪಂದ್ಯದಿಂದ ಹೊರಗುಳಿದಿದ್ದು, ಭಾರತದ ಸುಮಿತ್‌ ಮಲಿಕ್‌ ಅವರಿಗೆ ಚಿನ್ನ ಲಭಿಸಿದೆ.

ಇದೇ ಕೂಟದ ಮತ್ತೊಂದು ಪಂದ್ಯದಲ್ಲಿ ರಿಯೊ ಒಲಿಂಪಿಕ್‌ನಲ್ಲಿ ಚಿನ್ನ ಗೆದ್ದ ಕುಸ್ತಿಪಟು ಸಾಕ್ಷಿ ಮಲಿಕ್‌ ಎದುರಾಳಿ ನೈಜೀರಿಯಾದ ಅಮಿನಾಟ್ ಅಡೆನಿ ವಿರುದ್ಧ  ಉತ್ತಮ ಸೆಣಸಾಟ ನಡೆಸಿದರಾದರೂ 3–6ರಲ್ಲಿ ಸೋಲುಕಂಡರು. ಅವರು ಕಂಚಿಗಾಗಿ ಪ್ರಯತ್ನಿಸಲಿದ್ದಾರೆ.

ಸುಮಿತ್‌ ಮಲಿಕ್‌ಗೆ ಚಿನ್ನ ಲಭಿಸಿದಾಗ ಸಂಭ್ರಮಿಸಿದರು. –ಪಿಟಿಐ ಚಿತ್ರ

ಚಿನ್ನ ಗೆದ್ದ ವಿನೇಶಾ ಪೋಗಟ್‌ ನಮಿಸಿದ ಕ್ಷಣ –ಪಿಟಿಐ ಚಿತ್ರ

ಅಖಾಡದಲ್ಲಿ ಎದುರಾಳಿ ಜತೆ ವಿನೇಶಾ ಪೋಗಟ್‌ ಸೆಣಸಾಟ –ಪಿಟಿಐ ಚಿತ್ರ

ಪ್ರತಿಕ್ರಿಯಿಸಿ (+)