ಶುಕ್ರವಾರ, ಡಿಸೆಂಬರ್ 6, 2019
26 °C

ವಿಧಾನಸಭೆ ಚುನಾವಣೆ ತಯಾರಿ: ಕೇರಳ ಸಿಪಿಎಂ ನಾಯಕರ ಭೇಟಿ

Published:
Updated:
ವಿಧಾನಸಭೆ ಚುನಾವಣೆ ತಯಾರಿ: ಕೇರಳ ಸಿಪಿಎಂ ನಾಯಕರ ಭೇಟಿ

ಮಂಗಳೂರು: ನಗರದಲ್ಲಿರುವ ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಘಟಕದ‌ ಕಚೇರಿಗೆ ಶನಿವಾರ ಭೇಟಿ ನೀಡಿದ ಸಿಪಿಎಂ ಕೇರಳ ರಾಜ್ಯ ಘಟಕದ ‌ಹಿರಿಯ ನಾಯಕರು ವಿಧಾನಸಭಾ ಚುನಾವಣೆಯ ತಯಾರ ‌ಕುರಿತು ಸಮಾಲೋಚನೆ‌ ನಡೆಸಿದರು.

ಸಿಪಿಎಂ ಕೇರಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್, ಸಂಸದ ಕರುಣಾಕರನ್, ಪಾಲಿಟ್ ಬ್ಯೂರೋ ಸದಸ್ಯ ಎನ್.ಎ.ಬೇಬಿ ಸೇರಿದಂತೆ ಹಲವು ಪ್ರಮುಖ ನಾಯಕರು ಈ ತಂಡದಲ್ಲಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಮತ್ತು ಮೂಡುಬಿದಿರೆ ಕ್ಷೇತ್ರಗಳಲ್ಲಿ ‌ಚುನಾವಣಾ ತಯಾರಿ ಕುರಿತು ಪಕ್ಷದ ಸ್ಥಳೀಯ ಮುಖಂಡರಿಗೆ ಮಾರ್ಗದರ್ಶನ ನೀಡಿದರು.

ಸಿಪಿಎಂ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿರುವ‌ ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್, ನಿತಿನ್ ಕುತ್ತಾರೆ, ಕೆ.ಯಾದವ ಶೆಟ್ಟಿ ಮತ್ತು ಪಕ್ಷದ‌ ಪ್ರಮುಖ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)