ಸೋಮವಾರ, ಡಿಸೆಂಬರ್ 9, 2019
17 °C

ದಕ್ಷಿಣ ಆಫ್ರಿಕಾ: ಐವರು ಭಾರತೀಯರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಆಫ್ರಿಕಾ: ಐವರು ಭಾರತೀಯರ ಸಾವು

ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಅಪರಿಚಿತ ದುಷ್ಕರ್ಮಿಗಳು ಮನೆ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ ನಡೆಸಿದ್ದು, ಮೂವರು ಮಕ್ಕಳು ಸೇರಿ ಭಾರತೀಯ ಮೂಲದ ಕುಟುಂಬದ ಐವರು ಮೃತಪಟ್ಟಿದ್ದಾರೆ.

ಅಜೀಜ್‌ ಮಾಂಜ್ರಾ (45) ಮತ್ತು ಅವರ ಪತ್ನಿ ಗೋರಿ ಬೀಬಿ (ದಕ್ಷಿಣ ಆಫ್ರಿಕಾ ಪ್ರಜೆ), ಮಕ್ಕಳಾದ ಝುಬಿನಾ (18), ಮೈರೂನ್ನೀಸಾ (14) ಮತ್ತು ಮುಹಮ್ಮದ್‌ ರಿಜ್ವಾನ್‌ (10) ತಮ್ಮ ಮನೆಯಲ್ಲಿ ಗುರುವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಈ ಕುಟುಂಬ ಕಳೆದ 25 ವರ್ಷಗಳಿಂದ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿತ್ತು.

ಹದಿನೈದು ದಿನಗಳ ಹಿಂದೆಯಷ್ಟೇ ಈ ಕುಟುಂಬ ಬಾಡಿಗೆ ಮನೆಯಿಂದ ತಮ್ಮ ಸ್ವಂತ ಮನೆಗೆ ಬಂದಿತ್ತು. ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮಾಂಜ್ರಾ, ಕಷ್ಟಪಟ್ಟು ಕೂಡಿಟ್ಟಿದ್ದ ಹಣದಲ್ಲಿ ಕನಸಿನ ಮನೆ ಕಟ್ಟಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.

'ಮನೆಯ ಛಾವಣಿ ಮೇಲೆ ರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಯಾರೋ ನಡೆದಾಡಿದಂತೆ ಶಬ್ದ ಕೇಳಿಸಿತು. ವ್ಯಕ್ತಿಯೊಬ್ಬ 'ಅಲ್ಲಾಹ್‌' ಎಂದು ಕೂಗಿಕೊಂಡ. ಬಳಿಕ ಮನೆಯವರು ಕಿರುಚಿಕೊಂಡ ಸದ್ದು ಕೇಳಿಸಿತು. ನನಗೆ ಭಯವಾಯಿತು. ಹಾಗಾಗಿ ಏನಾಯಿತೆಂದು ನೋಡಲು ಹೋಗಲಿಲ್ಲ' ಎಂದು ಹೆಸರು ಹೇಳಲು ಬಯಸದ ಮಹಿಳೆಯೊಬ್ಬರು ತಿಳಿಸಿರುವುದಾಗಿ ‘ದಿ ಮರ್ಕ್ಯುರಿ’ ಪತ್ರಿಕೆ ವರದಿ ಮಾಡಿದೆ.

ಪ್ರತಿಕ್ರಿಯಿಸಿ (+)