ಸೋಮವಾರ, ಜುಲೈ 13, 2020
25 °C

ಸಣ್ಣ ಕೆರೆಗಳ ನಿರ್ಮಾತೃ ಕಾಮೇಗೌಡರಿಗೆ 'ಬಸವಶ್ರೀ' ಪ್ರಶಸ್ತಿ ಪ್ರದಾನ​

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಣ್ಣ ಕೆರೆಗಳ ನಿರ್ಮಾತೃ ಕಾಮೇಗೌಡರಿಗೆ 'ಬಸವಶ್ರೀ' ಪ್ರಶಸ್ತಿ ಪ್ರದಾನ​

ಚಿತ್ರದುರ್ಗ: ಇಲ್ಲಿನ ಬಸವ ಕೇಂದ್ರ ಮುರುಘಾ ಮಠದಿಂದ ನೀಡುವ 2017ನೇ ಸಾಲಿನ ಪ್ರತಿಷ್ಠಿತ ’ಬಸವಶ್ರೀ ಪ್ರಶಸ್ತಿ’ ಯನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ನಿಸರ್ಗ ಪ್ರೇಮಿ ಹಾಗೂ ಸಣ್ಣ ಕೆರೆಗಳ(ಚೆಕ್ ಡ್ಯಾಂ) ನಿರ್ಮಾತೃ ಕಾಮೇಗೌಡ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು.

ಮುರುಘಾ ಮಠದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ವಿಶಿಷ್ಟ ರೀತಿಯಲ್ಲಿ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಪ್ರಶಸ್ತಿಯು ₹ 5 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಸಮಾರಂಭದಲ್ಲಿ ಪ್ರಗತಿಪರ ರೈತ ಡಾ.ಮಲ್ಲಣ್ಣ ಶಂಕ್ರಪ್ಪ ನಾಗರಾಳ, ವಿವಿಧ ಮಠಾಧೀಶರು, ಗಣ್ಯರು ಇದ್ದರು.

ಇದನ್ನೂ ಓದಿರಿ..

ಕುರಿ ಮಾರಿ ಕೆರೆ ಕಟ್ಟಿದರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.