ಬುಧವಾರ, ಜುಲೈ 15, 2020
22 °C

ಹಾಲಿವುಡ್‌ನತ್ತ ರಾಧಿಕಾ ಆಪ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಲಿವುಡ್‌ನತ್ತ ರಾಧಿಕಾ ಆಪ್ಟೆ

ಹಿಂದಿ ಮತ್ತು ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳಲ್ಲಿನ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ರಾಧಿಕಾ ಆಪ್ಟೆ ಹಾಲಿವುಡ್‌ನತ್ತ ದೃಷ್ಟಿ ಬೀರಿದ್ದಾರೆ.

‘ಎರಡನೇ ವಿಶ್ವ ಸಮರ’ಕ್ಕೆ ಸಂಬಂಧಿಸಿದಂತೆ ನಿರ್ಮಾಣವಾಗಲಿರುವ ಈ ಸಿನಿಮಾದಲ್ಲಿ ಬೇಹುಗಾರಿಕೆಯಲ್ಲಿ ತೊಡಗುವ ಮಹಿಳೆಯ ಪಾತ್ರದಲ್ಲಿ ರಾಧಿಕಾ ಆಪ್ಟೆ ಕಂಡು ಬರಲಿದ್ದಾರೆ ಎಂದು ಸುದ್ದಿ ಹರಡಿದೆ. ಈ ಚಿತ್ರದಲ್ಲಿ ಖ್ಯಾತ ನಟರಾದ ಸ್ಟನಾ ಕಟಿಕ್‌ ಮತ್ತು ಸಾರಾ ಮೇಗನ್‌ ಥಾಮಸ್‌ ಅವರೂ ನಟಿಸಲಿದ್ದಾರೆ

ಬ್ರಿಟಿನ್‌ ಪ್ರಧಾನಿಯಾಗಿದ್ದ ವಿನ್‌ಸ್ಟನ್‌ ಚರ್ಚಿಲ್‌ ಅವರ ‘ರಹಸ್ಯ ಸೇನೆ’ಯಲ್ಲಿದ್ದ ಗೂಢಚಾರಿಗಳ ಜೀವನ ಚರಿತ್ರೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣಗೊಳ್ಳಲಿದೆ. ಭಾರತೀಯ ಮೂಲದ ನೂರ್‌ ಇನಾಯತ್‌ ಖಾನ್‌ ಪಾತ್ರದಲ್ಲಿ ರಾಧಿಕಾ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ ಮೈಕೆಲ್‌ ವಿಂಟರ್‌ಬಾಟಮ್‌ ಅವರು ನಿರ್ಮಿಸಲಿರುವ ‘ದಿ ವೆಡ್ಡಿಂಗ್‌ ಗೆಸ್ಟ್‌’ ಸಿನಿಮಾದಲ್ಲೂ ರಾಧಿಕಾ ನಟಿಸಲಿದ್ದಾರೆ.

ನೂರ್‌ ಬಗ್ಗೆ: ಮೈಸೂರಿನ ಟಿಪ್ಪು ಸುಲ್ತಾನ್ ವಂಶಸ್ಥೆಯಾಗಿದ್ದ ನೂರ್ ಇನಾಯತ್ ಖಾನ್, ಎರಡನೇ ಮಹಾ ಯುದ್ಧದದಲ್ಲಿ ಬ್ರಿಟನ್ನಿನ ಗೂಢಚಾರಣಿಯಾಗಿ ಕಾರ್ಯನಿರ್ವಹಿಸಿದ್ದರು. ನೂರ್ ಇನಾಯತ್ ಅವರು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪ್ಯಾರಿಸ್‌ನಲ್ಲಿ ಬ್ರಿಟನ್‌ನ ರಹಸ್ಯ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.