ಶುಕ್ರವಾರ, ಡಿಸೆಂಬರ್ 6, 2019
25 °C

‘ಸಂವಿಧಾನ ವಿರೋಧಿ ಬಿಜೆಪಿಗೆ ಮತ ಹಾಕಲ್ಲ’: ಮನೆ ಮುಂದೆ ಹಾಕಿದ್ದ ಬ್ಯಾನರ್ ತೆರವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಂವಿಧಾನ ವಿರೋಧಿ ಬಿಜೆಪಿಗೆ ಮತ ಹಾಕಲ್ಲ’: ಮನೆ ಮುಂದೆ ಹಾಕಿದ್ದ ಬ್ಯಾನರ್ ತೆರವು!

ಮಂಡ್ಯ: ‘ಸಂವಿಧಾನ ವಿರೋಧಿ ಬಿಜೆಪಿಗೆ ನಾವು ಮತ ಹಾಕುವುದಿಲ್ಲ. ಅಪಾಯ ಇದೆ ಎಚ್ಚರಿಕೆ’ ಹೀಗೆಂದು ಸಂವಿಧಾನ ಸಂರಕ್ಷಣಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಪೂರ್ಣಚಂದ್ರ ತಮ್ಮ ಮನೆಯ ಮುಂದೆ ಹಾಕಿದ್ದ ಬ್ಯಾನರ್‌ ಅನ್ನು ಚುನಾವಣಾಧಿಕಾರಿಗಳು ತೆರವುಗೊಳಿಸಿದರು.

ಇಲ್ಲಿನ ಗಾಂಧಿನಗರ, 7ನೇ ಕ್ರಾಸ್‌ನಲ್ಲಿರುವ ಪೂರ್ಣಚಂದ್ರ ಅವರ ಮನೆ ಭಾನುವಾರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ರಸ್ತೆಯಲ್ಲಿ ಓಡಾಡುವವರು ಆ ಬ್ಯಾನರ್‌ನತ್ತ ಕಣ್ಣು ಹಾಯಿಸಿ ಮುಂದಕ್ಕೆ ಹೋಗುತ್ತಿದ್ದರು. ಈ ಸುದ್ದಿ ಹರಡುತ್ತಿದ್ದಂತೆ ಸ್ಥಳಕ್ಕೆ ಬಂದ ಚುನಾವಣಾಧಿಕಾರಿಗಳು ಬ್ಯಾನರ್‌ ತೆರವುಗೊಳಿಸಿದರು.

‘ಬಿಜೆಪಿ ಸಂವಿಧಾನವನ್ನು ಬದಲಾಯಿಸಲು ಹೊರಟಿದೆ. ಸಂವಿಧಾನ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಹೀಗಾಗಿ ನಾನು ಬಿಜೆಪಿಗೆ ಮತ ಹಾಕುವುದಿಲ್ಲ. ಈ ಸಂದೇಶವನ್ನು ಎಲ್ಲರಿಗೂ ನೀಡುವ ಉದ್ದೇಶದಿಂದ ಬ್ಯಾನರ್‌ ಹಾಕಿದ್ದೆ’ ಎಂದು ಎಸ್‌. ಪೂರ್ಣಚಂದ್ರ ತಿಳಿಸಿದರು.

ಪ್ರತಿಕ್ರಿಯಿಸಿ (+)