ದಂಪತಿ ಆತ್ಮಹತ್ಯೆ

ಸೋಮವಾರ, ಮಾರ್ಚ್ 25, 2019
28 °C

ದಂಪತಿ ಆತ್ಮಹತ್ಯೆ

Published:
Updated:
ದಂಪತಿ ಆತ್ಮಹತ್ಯೆ

ಶಿವಮೊಗ್ಗ: ಪೊಲೀಸರು ಎಂದು ಹೇಳಿಕೊಂಡ ವ್ಯಕ್ತಿಗಳಿಬ್ಬರಿಗೆ ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ತಪಾಸಣೆಗಾಗಿ ನೀಡಿದ ಹಣ ಕಳೆದುಕೊಂಡ ದಂಪತಿ ಮನನೊಂದು ನಗರದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಲ್ಲಿನ ಕೊರಮರ ಬೀದಿಯ ರಮೇಶ್ (45), ಮೂಕಾಂಬಿಕಾ (42) ಮೃತ ದಂಪತಿ. ಅನೇಕ ಕಡೆಗಳಲ್ಲಿ ಸಾಲ ಮಾಡಿಕೊಂಡಿದ್ದ ರಮೇಶ್‌, ಸಾಲ ತೀರಿಸಲು ತೀರ್ಥಹಳ್ಳಿಗೆ ಹೋಗಿ, ಅಲ್ಲಿನ ಪರಿಚಯಸ್ಥರ ಬಳಿ ₹ 2 ಲಕ್ಷ ಸಾಲ ಪಡೆದು ಬರುತ್ತಿದ್ದರು.

ಚೆಕ್‌ಪೋಸ್ಟ್‌ ಸಮೀಪದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ನೆಪ ಮಾಡಿಕೊಂಡ ವ್ಯಕ್ತಿಗಳು ಪೊಲೀಸರ ಸೋಗಿನಲ್ಲಿ ರಮೇಶ್ ಅವರನ್ನು ತಡೆದು, ಅವರ ಬಳಿಯಿದ್ದ ಹಣವನ್ನು ವಶ ಪಡೆದು ವಂಚಿಸಿದ್ದರು. ಈ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry