ಶನಿವಾರ, ಆಗಸ್ಟ್ 8, 2020
22 °C

ಅತ್ಯಾಚಾರಕ್ಕೆ ಮತ್ತೊಬ್ಬ ಬಾಲಕಿ ಬಲಿ

ಪಿಟಿಐ Updated:

ಅಕ್ಷರ ಗಾತ್ರ : | |

ಅತ್ಯಾಚಾರಕ್ಕೆ ಮತ್ತೊಬ್ಬ ಬಾಲಕಿ ಬಲಿ

ಮುಂಬೈ/ಸೂರತ್: ಕಠುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳ ವಿರುದ್ಧ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ, ಮತ್ತೊಬ್ಬ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ.

ಗುಜರಾತ್‌ನ ಸೂರತ್‌ನಲ್ಲಿ 6ರಂದು 11 ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ಆ ಬಾಲಕಿಯ ಶವಪರೀಕ್ಷೆಯ ವರದಿಯು ಶನಿವಾರ ರಾತ್ರಿ ಪೊಲೀಸರಿಗೆ ಲಭ್ಯವಾಗಿದ್ದು, ಆಕೆಯ ಮೇಲೆ ಏಳು ದಿನ ಸತತವಾಗಿ ಅತ್ಯಾಚಾರ ನಡೆಸಲಾಗಿದೆ ಎಂದು ಅದರಲ್ಲಿ ವಿವರಿಸಲಾಗಿದೆ.

‘ಸೂರತ್‌ನ ಕ್ರಿಕೆಟ್ ಮೈದಾನವೊಂದರ ಬಳಿಯ ಪೊದೆಯಲ್ಲಿ ಬಾಲಕಿಯ ಶವ ಬಿದ್ದಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಬಾಲಕಿಯ ದೇಹದ ಎಲ್ಲೆಡೆ ಗಾಯಗಳಾಗಿದ್ದವು. ಆಕೆಯ ಮೇಲೆ ಹಲವು ಭಾರಿ ಅತ್ಯಾಚಾರ ನಡೆಸಲಾಗಿದೆ ಎಂಬುದು ಶವಪರೀಕ್ಷೆಯಲ್ಲಿ ಪತ್ತೆಯಾಗಿದೆ. ಆಕೆಯ ಗುರುತು ಪತ್ತೆಯಾಗಿಲ್ಲ. ಹೀಗಾಗಿ ನಾವೇ ಆಕೆಯ ಚಿತ್ರವನ್ನು ಪತ್ರಿಕೆಗಳು, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳಲ್ಲಿ ಪ್ರಕಟಿಸಿ ಪೋಷಕರನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ’ ಎಂದು ಸೂರತ್ ಪೊಲೀಸ್ ಆಯುಕ್ತ ಸತೀಶ್ ಶರ್ಮಾ ಮಾಹಿತಿ ನೀಡಿದ್ದಾರೆ.

‘ಈ ಪ್ರಕರಣದ ತನಿಖೆಗೆ ಅತ್ಯುತ್ತಮ ಅಧಿಕಾರಿಗಳನ್ನು ಒಳಗೊಂಡಿರುವ ತಂಡವನ್ನು ರಚಿಸಲಾಗಿದೆ. ತನಿಖೆಗೆ ನೆರೆಯ ರಾಜ್ಯಗಳ ಪೊಲೀಸರ ಸಹಕಾರವನ್ನೂ ಕೇಳಲಾಗಿದೆ’ ಎಂದು ಶರ್ಮಾ ತಿಳಿಸಿದ್ದಾರೆ.

**

ಏಪ್ರಿಲ್ 6ರಂದು ಪತ್ತೆಯಾಗಿದ್ದ ಬಾಲಕಿ ಶವ

ಅತ್ಯಾಚಾರ ದೃಢಪಡಿಸಿದ ಶವಪರೀಕ್ಷೆ

ಕೊಲೆಗೂ ಮುನ್ನ ಏಳು ದಿನ ಅತ್ಯಾಚಾರ, ಹಲ್ಲೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.