ಭಾನುವಾರ, ಡಿಸೆಂಬರ್ 15, 2019
19 °C

ಅಭ್ಯರ್ಥಿ ಆಯ್ಕೆಯಲ್ಲಿ ಗೆಲುವೊಂದೇ ಮಾನದಂಡ: ಪರಮೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭ್ಯರ್ಥಿ ಆಯ್ಕೆಯಲ್ಲಿ ಗೆಲುವೊಂದೇ ಮಾನದಂಡ: ಪರಮೇಶ್ವರ

ಬೆಂಗಳೂರು: ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು. ಹೀಗಾಗಿ ಗೆಲ್ಲುವೊಂದೇ ಮಾನದಂಡವಾಗಿಟ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಸ್ಪಷ್ಟ ಪಡಿಸಿದರು.

ಪ್ರತಿ ಕ್ಷೇತ್ರದಲ್ಲೂ ಹಲವು ಆಕಾಂಕ್ಷಿಗಳಿದ್ದರು. ಹಾಲಿ ಶಾಸಕರು ಇರುವ ಕಡೆಗಳಲ್ಲಿಯೂ ಸ್ಪರ್ಧೆ ಬಯಸಿ ಕೆಲವರು ಅರ್ಜಿ ಸಲ್ಲಿಸಿದ್ದರು. ಕೇಂದ್ರ ಚುನಾವಣಾ ಸಮಿತಿ ಎಲ್ಲವನ್ನೂ ಪರಿಶೀಲಿಸಿ. ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸೋಮವಾರ ತಿಳಿಸಿದರು.

‘ಟಿಕೆಟ್ ಸಿಗದವರಿಗೆ ನಿರಾಶೆ ಆಗುವುದು ಸಹಜ. ಮತ್ತೆ 5 ವರ್ಷ ಕಾಯಬೇಕಲ್ಲ. ಆದರೆ, 3-4 ಆಕಾಂಕ್ಷಿಗಳಿದ್ದರೆ ಒಬ್ಬರಿಗೆ ಮಾತ್ರ ಟಿಕೆಟ್ ನೀಡಲು ಸಾಧ್ಯ. ಅಸಮಾಧಾನಗೊಂಡವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮನವೊಲಿಸಿ ಮುಂದುವರಿಯುತ್ತೇವೆ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಶಾಂತಿ ನಗರ ಸೇರಿ ಆರು ಕ್ಷೇತ್ರಗಳಿಗೆ ತಾಂತ್ರಿಕ ಕಾರಣದಿಂದಾಗಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಈ ಕ್ಷೇತ್ರಗಳಿಗೂ ಶೀಘ್ರದಲ್ಲಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದರು.

ಇದೇ 27, 28 ರಂದು ರಾಹುಲ್ ಗಾಂಧಿ ಗದಗ, ಹಾವೇರಿ, ಉತ್ತರ ಕನ್ನಡ ಮತ್ತು ಮಡಿಕೇರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವರು. ರೋಡ್ ಷೋ, ಸಾರ್ವಜನಿಕ ಸಭೆ ನಡೆಯಲಿದೆ. ಮತ್ತೆ ಮೇ 3,4,7,8,9,10ರಂದು ಮತ್ತೊಮ್ಮೆ ಬರಲಿದ್ದಾರೆ ಎಂದರು.

ಪ್ರತಿಕ್ರಿಯಿಸಿ (+)