ಶನಿವಾರ, ಡಿಸೆಂಬರ್ 7, 2019
25 °C

ಮಸಾಲದೋಸೆ ತಿನ್ನಿ, ನಿಮ್ಮ ಸ್ವಭಾವ ಗೊತ್ತಾಗುತ್ತೆ

Published:
Updated:
ಮಸಾಲದೋಸೆ ತಿನ್ನಿ, ನಿಮ್ಮ ಸ್ವಭಾವ ಗೊತ್ತಾಗುತ್ತೆ

ತೆರೆದ ಪುಸ್ತಕ

ಮಸಾಲದೋಸೆಯನ್ನು ಸುರುಳಿಯಾಗಿ ಮಡಚಿ ಕೊಡುತ್ತಾರೆ. ಅದನ್ನು ಬಿಡಿಸಿ ತಿನ್ನುವುದು ನಿಮ್ಮ ಶೈಲಿಯಾಗಿದ್ದರೆ ನಿಮ್ಮ ಮನಸ್ಥಿತಿ ತೆರೆದ ಪುಸ್ತಕದಂಥದ್ದು. ನಿಮಗೆ ಯಾವುದೇ ವಿಷಯವನ್ನೂ ಮುಚ್ಚಿಟ್ಟುಕೊಳ್ಳಲು ಆಗುವುದಿಲ್ಲ. ಮಸಾಲದೋಸೆಯನ್ನು ಹೀಗೆ ಬಿಡಿಸಿ ತಿನ್ನುವವರಲ್ಲಿ ಗಂಡಸರ ಸಂಖ್ಯೆಯೇ ಹೆಚ್ಚು. ಗುಟ್ಟು ಮಾಡಲು ಬಾರದ ಗಂಡಸರು, ಪಾಪ.

ಕೊನೆಗೆ ಪಲ್ಯ

ಎರಡೂ ಬದಿಯಿಂದ ದೋಸೆ ಮುರಿದು ಮುಕ್ಕು, ಕೊನೆಗೆ ಪಲ್ಯ ತಿನ್ನುವುದು ಕೆಲವರಿಗೆ ಇಷ್ಟ. ಇವರು ಆಶಾವಾದಿಗಳು. ಭವಿಷ್ಯದಲ್ಲಿ

ಯಾವುದೋ ಉತ್ತಮ ವಿಚಾರಕ್ಕಾಗಿ ಕಾಯುತ್ತಿರುತ್ತಾರೆ. ಕಂಡ ಕನಸು ಸಾಕಾರಗೊಂಡರೂ ಇವರಿಗೆ ಸಂತೋಷವೇನೂ ಆಗುವುದಿಲ್ಲ. ‘ಹೀಗೆ ಆಗುತ್ತೆ ಅಂದುಕೊಂಡಿದ್ದೆ’ ಎಂದು ಎಂದಿನಂತೆ ನೀರಸ ಬದುಕನ್ನೇ ಮುಂದುವರಿಸುವುದು ಇವರ ರೀತಿ.

ಪಲ್ಯ ತಿಂದ ಬಳಿಕ ದೋಸೆ

ದೋಸೆಯ ಮಧ್ಯದಲ್ಲಿ ತೂತು ಮಾಡಿ, ಮೊದಲು ಪಲ್ಯ ತಿಂದು ನಂತರ ದೋಸೆಯನ್ನು ಚಪ್ಪರಿಸುವ ಶೈಲಿ ಕೆಲವರದು. ಇಂಥವರಿಗೆ ಸಾಮಾನ್ಯವಾಗಿ ಜೀವನ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ಇರುತ್ತದೆ. ಬಹುತೇಕ ಪ್ರಸಂಗಗಳಲ್ಲಿ ಸ್ಪಷ್ಟ ಯೋಜನೆ ರೂಪಿಸಿಕೊಂಡ ನಂತರವೇ ವೈಯಕ್ತಿಕ ಜೀವನ ಹಾಗೂ ಕೆರಿಯರ್‌ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇಂಥ ನಿರ್ಧಾರಗಳಿಂದ ಕೆಲವೊಮ್ಮೆ ಕಷ್ಟದ ಸಂದರ್ಭಗಳು ಎದುರಾಗಬಹುದು.

ಹಂಚಿಕೊಂಡು ತಿನ್ನಲಾರೆ

ಇಂಥವರು ತುಂಬಾ ರಕ್ಷಣಾತ್ಮಕವಾಗಿರುತ್ತಾರೆ. ತಮ್ಮ ಜೀವನದಲ್ಲಿ ಬೇರೆಯವರು ಹಸ್ತಕ್ಷೇಪ ಮಾಡುವುದನ್ನು ಅವರು ಸಹಿಸುವುದಿಲ್ಲ. ಇವರಿಗೆ ತಮ್ಮ ಜೀವನದ ರಹಸ್ಯಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ಗೊತ್ತಿರುತ್ತದೆ.

ಮೊದಲ ತುತ್ತು ಪರರಿಗೆ

ಇವರು ಅತಿ ಹೆಚ್ಚು ಸ್ನೇಹಿಯಾಗಿರುತ್ತಾರೆ. ಸ್ನೇಹಿತರ ಗುಂಪಿಗಾಗಿ ಕೆಲಸಗಳನ್ನು ಮಾಡಿಕೊಡುತ್ತಾರೆ. ಯಾವಾಗಲೂ ಇತರರ ಸುಖಕ್ಕಾಗಿ ಯೋಚನೆ ಮಾಡುತ್ತಾರೆ. ಸ್ವಭಾವತಃ ಸ್ನೇಹಜೀವಿಗಳು. ಗುಂಪಿನಲ್ಲಿ ಉತ್ತಮ ಕೆಲಸ ಮಾಡಲು ಶ್ರಮ ಪಡುತ್ತಾರೆ.

ತಿನ್ನು ಅನ್ನೋರಿಗಾಗಿ ಕಾಯೋರು

ಇಂಥವರು ಎಲ್ಲದಕ್ಕೂ ಮತ್ತೊಬ್ಬರ ಅಣತಿ ನಿರೀಕ್ಷಿಸುತ್ತಾರೆ. ಬೇರೆಯವರನ್ನು ಅನುಕರಣೆ ಮಾಡುತ್ತಾರೆ. ತಮ್ಮ ಜೀವನದ ನಿರ್ಧಾರ ಅಥವಾ ಘಟನೆಗಳ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಅತಿ ಬುದ್ಧಿವಂತರಾಗಿದ್ದರೂ, ಸೃಜನಶೀಲ ಆಲೋಚನೆಗಳನ್ನು ಹೊಂದಿದ್ದರೂ, ಬೇರೆಯವರ ಎದುರಿನಲ್ಲಿ ನೇರವಾಗಿ ಹೇಳಲು ಹಿಂಜರಿಯುತ್ತಾರೆ. ಪರೋಕ್ಷವಾಗಿ ಸಂವಹನ ನಡೆಸಲು ಪ್ರಯತ್ನಿಸುತ್ತಾರೆ.

***

ಕೊನೆಯವರೆಗೂ ಪಲ್ಯ ಇರುತ್ತೆ

ಕೆಲವರು ದೋಸೆ ಮುಗಿಯುವವರೆಗೂ ಪಲ್ಯವನ್ನು ಉಳಿಸಿಕೊಂಡಿರುತ್ತಾರೆ. ಇಂಥವರು ಜೀವನದಲ್ಲಿ ಎಲ್ಲವೂ ಸರಿಯಾಗಿರಬೇಕು ಎಂದು ಬಯಸುವ ಪೈಕಿ. ಸಾಮಾನ್ಯವಾಗಿ ಒಂಟಿತನ ಆಸ್ವಾದಿಸುತ್ತಾರೆ. ಜೀವನದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯಬೇಕು,  ಸಮತೋಲನದಲ್ಲಿರಬೇಕು ಎಂದು ಬಯಸುವ ಇಂತಹ ಜನರು ಸಿಗುವುದು ಅಪರೂಪ. ಇವರನ್ನು ಸುಲಭವಾಗಿ ಒಪ್ಪಿಸಲು ಅಥವಾ ಸಂತೋಷಪಡಿಸಲು ಸಾಧ್ಯವಿಲ್ಲ. ಅವರು ಬೇರೆಯವರಿಗೆ ಒಳ್ಳೆ ಕಂಪೆನಿಯೂ ಆಗುವುದಿಲ್ಲ.

ಮಾಹಿತಿಗೆ: bro4u.com

ಪ್ರತಿಕ್ರಿಯಿಸಿ (+)