ಸೋಮವಾರ, ಆಗಸ್ಟ್ 10, 2020
26 °C

ಟೆನಿಸ್‌: ಜಾನ್ಸನ್‌ಗೆ ಸಿಂಗಲ್ಸ್‌ ಗರಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಟೆನಿಸ್‌: ಜಾನ್ಸನ್‌ಗೆ ಸಿಂಗಲ್ಸ್‌ ಗರಿ

ಹ್ಯೂಸ್ಟನ್‌: ದಿಟ್ಟ ಆಟ ಆಡಿದ ಅಮೆರಿಕದ ಸ್ಟೀವ್‌ ಜಾನ್ಸನ್‌, ಅಮೆರಿಕ ಓಪನ್‌ ಕ್ಲೇ ಕೋರ್ಟ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ರಿವರ್‌ ಒಕಾಸ್‌ ಕಂಟ್ರಿ ಕ್ಲಬ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಜಾನ್ಸನ್‌ 7–6, 2–6, 6–4ರಲ್ಲಿ ತೆನ್ನಿಸ್‌ ಸ್ಯಾಂಡ್‌ಗ್ರೆನ್‌ ಅವರನ್ನು ಸೋಲಿಸಿದರು. ಈ ಹೋರಾಟ ಎರಡು ಗಂಟೆ 22 ನಿಮಿಷ ನಡೆಯಿತು. ವಿಶ್ವ ರ‍್ಯಾಂಕಿಂಗ್‌ನಲ್ಲಿ 51ನೆ ಸ್ಥಾನದಲ್ಲಿರುವ ಜಾನ್ಸನ್‌, ಎಟಿಪಿ ಟೂರ್‌ನ ಸಿಂಗಲ್ಸ್‌ನಲ್ಲಿ ಗೆದ್ದ ಮೂರನೆ ಪ್ರಶಸ್ತಿ ಇದಾಗಿದೆ.

ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದ್ದ ಸ್ಯಾಂಡ್‌ಗ್ರೆನ್‌ ಆರಂಭಿಕ ಸೆಟ್‌ನಲ್ಲಿ ಜಾನ್ಸನ್‌ಗೆ ಪ್ರಬಲ ಪೈ‍ಪೋಟಿ ನೀಡಿದರು. ಹೀಗಾಗಿ ಸೆಟ್‌ ‘ಟೈ ಬ್ರೇಕರ್‌’ಗೆ ಸಾಗಿತು. ರೋಚಕ ಘಟ್ಟ ದಲ್ಲಿ ಮಿಂಚಿನ ಆಟ ಆಡಿದ ಜಾನ್ಸನ್‌ ಸೆಟ್‌ ಜಯಿಸಿ 1–0ಯಿಂದ ಮುನ್ನಡೆ ಗಳಿಸಿದರು.

ಎರಡನೆ ಸೆಟ್‌ನಲ್ಲಿ ಸ್ಯಾಂಡ್‌ಗ್ರೆನ್‌ ಮೋಡಿ ಮಾಡಿದರು. ಶರವೇಗದ ಸರ್ವ್‌ ಮತ್ತು ಚುರುಕಿನ ರಿಟರ್ನ್‌ಗಳ ಮೂಲಕ ಗೇಮ್‌ ಗೆದ್ದ ಅವರು ಶೀಘ್ರವೆ ಮುನ್ನಡೆ ಗಳಿಸಿದರು. ಇದರಿಂದ ಜಾನ್ಸನ್‌ ಒತ್ತಡಕ್ಕೆ ಒಳಗಾದರು. ಇದನ್ನು ಅರಿತ ಸ್ಯಾಂಡ್‌ಗ್ರೆನ್‌, ಬೇಸ್‌ ಲೈನ್‌ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ನಿರ್ಣಾಯಕ ಎನಿಸಿದ್ದ ಮೂರನೆ ಸೆಟ್‌ನಲ್ಲಿ ಇಬ್ಬರೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ 4–4ರ ಸಮಬಲ ಕಂಡುಬಂತು. ಒಂಬತ್ತನೆ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡ ಜಾನ್ಸನ್‌, ಮರು ಗೇಮ್‌ನಲ್ಲಿ ಎದು ರಾಳಿಯ ಸರ್ವ್‌ ಮುರಿದು ಖುಷಿಯ ಕಡಲಲ್ಲಿ ತೇಲಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.