ಶುಕ್ರವಾರ, ಡಿಸೆಂಬರ್ 13, 2019
19 °C

ದಕ್ಷಿಣ ಆಫ್ರಿಕಾದಲ್ಲಿ ‘ಗಾಂಧಿ ನಡಿಗೆ’

ಪಿಟಿಐ Updated:

ಅಕ್ಷರ ಗಾತ್ರ : | |

ದಕ್ಷಿಣ ಆಫ್ರಿಕಾದಲ್ಲಿ ‘ಗಾಂಧಿ ನಡಿಗೆ’

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್‌ ರಾಮ್‌ಪೋಸ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಗಾಂಧಿ ನಡಿಗೆಯಲ್ಲಿ ಸುಮಾರು ಐದು ಸಾವಿರ ಮಂದಿ ಪಾಲ್ಗೊಂಡಿದ್ದರು. ಭಾರತೀಯರೇ ಹೆಚ್ಚಿರುವ ಲೆನೇಸಿಯಾ ನಗರದಲ್ಲಿ ವಾರ್ಷಿಕ ‘ಗಾಂಧಿ­ ನಡಿಗೆ’ ನಡೆಯಿತು.

‘ಗೋಯಿಂಗ್‌ ಗ್ರೀನ್‌’ ಈ ವರ್ಷದ ನಡಿಗೆಯ ಪರಿಕಲ್ಪನೆ. ಪರಿಸರ ಸಂರಕ್ಷಣೆ ಮತ್ತು ಫಿಟ್‌ನೆಸ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನಡಿಗೆಯ ಉದ್ದೇಶವಾಗಿತ್ತು. ಹನ್ನೆರಡು ಕಿ.ಮೀವರೆಗೆ ನಡಿಗೆ ಸಾಗಿತು. 33ನೇ ‘ಗಾಂಧಿ ನಡಿಗೆ’ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ದೇಶದ ಅಧ್ಯಕ್ಷರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)