ಜಮ್ಮು ಕಾಶ್ಮೀರ: ಪೊಲೀಸ್ ಠಾಣೆ ಮೇಲೆ ಉಗ್ರರ ದಾಳಿ

ಶೋಪಿಯಾನ್: ಜಮ್ಮು–ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ಉಗ್ರರು ಹಲವು ಸುತ್ತಿನ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಮಂಗಳವಾರ ವರದಿಯಾಗಿದೆ.
ದಾಳಿ ವೇಳೆ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
#JammuAndKashmir: Terrorists fired upon Shopian Police Station & fled after firing several rounds, no loss of life or damage reported, area being cordoned off. More details awaited. pic.twitter.com/tHYFIwRrJg
— ANI (@ANI) April 17, 2018
ಉಗ್ರರು ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿರಿಸಿ ಸೋಮವಾರವೂ ದಾಳಿ ನಡೆಸಿದ್ದರು. ಈ ವೇಳೆ ಒಬ್ಬ ಪೊಲೀಸ್ ಹಾಗೂ ಮತ್ತೊಬ್ಬ ನಾಗರಿಕ ಗಾಯಗೊಂಡಿದ್ದರು.
ಪ್ರತಿಕ್ರಿಯಿಸಿ (+)