ಪಕ್ಷೇತರನಾಗಿ ಸ್ಪರ್ಧೆ: ಶ್ರೀನಿವಾಸ್‌

ಮಂಗಳವಾರ, ಮಾರ್ಚ್ 26, 2019
31 °C

ಪಕ್ಷೇತರನಾಗಿ ಸ್ಪರ್ಧೆ: ಶ್ರೀನಿವಾಸ್‌

Published:
Updated:
ಪಕ್ಷೇತರನಾಗಿ ಸ್ಪರ್ಧೆ: ಶ್ರೀನಿವಾಸ್‌

ಚಿಕ್ಕಮಗಳೂರು: ‘ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿ ಪ್ರಚಾರ ಆರಂಭಿಸಿದ್ದೇನೆ. ಇನ್ನು ನಾಲ್ಕೈದು ದಿನಗಳಲ್ಲಿ ನಾಮಪತ್ರ ಸಲ್ಲಿಸುತ್ತೇನೆ’ ಎಂದು ತರೀಕೆರೆ ಕ್ಷೇತ್ರದ ಶಾಸಕ ಜಿ.ಎಚ್‌.ಶ್ರೀನಿವಾಸ್‌ ತಿಳಿಸಿದರು.

ಮಂಗಳವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದೆ. ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಜೆಡಿಎಸ್‌ ಅಥವಾ ಇನ್ನಾವುದೇ ಪಕ್ಷದವರನ್ನು ಸಂಪರ್ಕಿಸಿಲ್ಲ’ ಎಂದು ಹೇಳಿದರು.

ಕಾಂಗ್ರೆಸ್‌ ತೊರೆಯುವುದಿಲ್ಲ: ಗಾಯತ್ರಿ ಶಾಂತೇಗೌಡ

‘ಪಕ್ಷವನ್ನು ತೊರೆಯವುದಿಲ್ಲ, ಪಕ್ಷೇತರವಾಗಿ ಸ್ಪರ್ಧಿಸುವುದೂ ಇಲ್ಲ. ಟಿಕೆಟ್‌ ಕೈತಪ್ಪಿದ್ದಕ್ಕೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಸ ಮಾಡು, ನಿನ್ನನ್ನು ಪಕ್ಷ ಕೈಬಿಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ’ ಎಂದು ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಗಾಯತ್ರಿ ಶಾಂತೇಗೌಡ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry