ಗುರುವಾರ , ಆಗಸ್ಟ್ 13, 2020
21 °C

ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಸ್ವೀಡನ್‌ ನೆರವು

ಪಿಟಿಐ Updated:

ಅಕ್ಷರ ಗಾತ್ರ : | |

ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಸ್ವೀಡನ್‌ ನೆರವು

ಸ್ಟಾಕ್‌ಹೋಮ್‌: ಸೇನಾ ಮತ್ತು ಭದ್ರತಾ ಕ್ಷೇತ್ರಗಳ ಪರಸ್ಪರ ಸಹಕಾರ ಬಲವರ್ಧನೆಗೆ ಭಾರತ ಮತ್ತು ಸ್ವೀಡನ್‌ ಮುಂದಾಗಿವೆ. ಸೈಬರ್‌ ಸುರಕ್ಷತೆ, ರಕ್ಷಣಾ ವಲಯದ ಉತ್ಪಾದನೆಗೆ ವಿನೂತನ ಸಹಭಾಗಿತ್ವ ಮತ್ತು ಜಂಟಿ ಕ್ರಿಯಾಯೋಜನೆಗೆ ಎರಡೂ ರಾಷ್ಟ್ರಗಳು ಸಹಿ ಹಾಕಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ವೀಡನ್‌ ಪ್ರಧಾನಿ ಸ್ಟೀಫನ್‌ ಲೋಫ್‌ವೆನ್‌ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಸುಸಜ್ಜಿತ ನಗರ (ಸ್ಮಾರ್ಟ್‌ಸಿಟಿ) ನಿರ್ಮಾಣ, ಪರಿಸರ ಸ್ನೇಹಿ ತಂತ್ರಜ್ಞಾನ ಅಳವಡಿಕೆಯಲ್ಲಿ ಸ್ವೀಡನ್‌, ಭಾರತಕ್ಕೆ ನೆರವು ನೀಡಲಿದೆ ಎಂದು ಮೋದಿ ತಿಳಿಸಿದರು.

ಇಂಡಿಯಾ–ನಾರ್ಡಿಕ್‌ ಶೃಂಗಸಭೆಯಲ್ಲಿ ಭಾಗವಹಿಸಿದ್ದ ನಾರ್ವೆ, ಡೆನ್ಮಾರ್ಕ್‌, ಫಿನ್ಲೆಂಡ್‌, ಐಸ್‌ಲ್ಯಾಂಡ್‌ ಪ್ರಧಾನಿಗಳ ಜತೆ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಉದ್ಯಮಿಗಳು ಮತ್ತು ವಿವಿಧ ಕಂಪೆನಿಗಳ ಸಿಇಒಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದ ಮೋದಿ ಅವರು, ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ, ಶುದ್ಧ ಇಂಧನ, ವಾಣಿಜ್ಯ ವಹಿವಾಟು ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಿದರು.

ಬ್ರಿಟನ್‌ನಲ್ಲಿ ಬುಧವಾರ ಕಾಮನ್‌ವೆಲ್ತ್‌ ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.