ಅನಾರೋಗ್ಯದ ನಡುವೆ ಕುಮಾರಸ್ವಾಮಿ ಪ್ರಚಾರ

ಮಂಗಳವಾರ, ಮಾರ್ಚ್ 26, 2019
27 °C

ಅನಾರೋಗ್ಯದ ನಡುವೆ ಕುಮಾರಸ್ವಾಮಿ ಪ್ರಚಾರ

Published:
Updated:
ಅನಾರೋಗ್ಯದ ನಡುವೆ ಕುಮಾರಸ್ವಾಮಿ ಪ್ರಚಾರ

ಮಡಿಕೇರಿ: ನಿರಂತರ ಪ್ರಚಾರದಲ್ಲಿ ತೊಡಗಿಕೊಂಡಿರುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಮವಾರ ಪ್ರಚಾರ ನಡೆಸಿದ್ದ ಅವರು, ರಾತ್ರಿ ವಿರಾಜಪೇಟೆಯ ಅಂಬಟಿ ಗ್ರೀನ್‌ ರೆಸಾರ್ಟ್‌ನಲ್ಲಿ ತಂಗಿದ್ದರು. ಮಂಗಳವಾರ ಬೆಳಿಗ್ಗೆ ಜ್ವರದಿಂದ ಬಳಲುತ್ತಿದ್ದ ಅವರಿಗೆ ವೈದ್ಯರು ಚಿಕಿತ್ಸೆ ನೀಡಿ ವಿಶ್ರಾಂತಿಗೆ ಸೂಚಿಸಿದ್ದರು. ರೆಸಾರ್ಟ್‌ನಲ್ಲೇ ಬೆಳಿಗ್ಗೆ 11 ಗಂಟೆವರೆಗೆ ಅವರು ವಿಶ್ರಾಂತಿ ಪಡೆದರು. ಹೀಗಾಗಿ, 10ಕ್ಕೆ ಆರಂಭವಾಗಬೇಕಿದ್ದ ಜೆಡಿಎಸ್‌ ಸಮಾವೇಶ ಮಧ್ಯಾಹ್ನ 12 ಗಂಟೆಗೆ ಆರಂಭಗೊಂಡಿತು. ಬಳಿಕ ಅವರು ವಿರಾಜಪೇಟೆ, ಕುಶಾಲನಗರದಲ್ಲಿ ಪ್ರಚಾರ ನಡೆಸಿದರು.

‘ಮನೆಯಲ್ಲಿ ಮಲಗಿದ್ದ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಲಾಯಿತು. ಆದರೂ ಪಕ್ಷ ಸಂಘಟನೆಗೆ ಯಾವ ಕೊಡುಗೆಯನ್ನೂ ನೀಡಲಿಲ್ಲ. ಆತ ದೊಡ್ಡ ವ್ಯಕ್ತಿ. ಪಕ್ಷ ತೊರೆದಿರುವುದರಿಂದ ಜೆಡಿಎಸ್‌ಗೆ ಯಾವ ನಷ್ಟವಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry