ಭಾನುವಾರ, ಡಿಸೆಂಬರ್ 15, 2019
23 °C

ಟೆನಿಸ್‌: ಎರಡನೇ ಸುತ್ತಿಗೆ ಜೊಕೊವಿಚ್‌

ಎಎಫ್ ಪಿ Updated:

ಅಕ್ಷರ ಗಾತ್ರ : | |

ಟೆನಿಸ್‌: ಎರಡನೇ ಸುತ್ತಿಗೆ ಜೊಕೊವಿಚ್‌

ಮಾಂಟೆ ಕಾರ್ಲೋ: ದಿಟ್ಟ ಆಟ ಆಡಿದ ಸರ್ಬಿಯಾದ ನೊವಾಕ್‌ ಜೊಕೊವಿಚ್‌, ಎಟಿಪಿ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ನೊವಾಕ್‌ 6–0, 6–1ರ ನೇರ ಸೆಟ್‌ಗಳಿಂದ ಸರ್ಬಿಯಾದವರೇ ಆದ ದುಸಾನ್‌ ಲಾಜೊವಿಚ್‌ ಅವರನ್ನು ಸೋಲಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೆ ಸ್ಥಾನ ಹೊಂದಿರುವ ನೊವಾಕ್‌ ಎರಡೂ ಸೆಟ್‌ಗಳಲ್ಲಿ ಪ್ರಾಬಲ್ಯ ಮೆರೆದರು. ಕೆನಡಾದ ಮಿಲೊಸ್‌ ರಾವನಿಕ್‌ 3–6, 6–2, 6–3ರಲ್ಲಿ ಲುಕಾಸ್‌ ಕ್ಯಾಟರಿನಾ ಅವರನ್ನು ಮಣಿಸಿದರು.

ಇತರೆ ಪಂದ್ಯಗಳಲ್ಲಿ ಅಲಜಾಜ್‌ ಬೆಡೆನೆ 6–4, 7–6ರಲ್ಲಿ ಮಿರ್ಜಾ ಬೆಸಿಕ್‌ ಎದುರೂ, ಪಿಯೆರೆ ಹ್ಯೂಸ್‌ ಹರ್ಬರ್ಟ್‌ 7–6, 6–4ರಲ್ಲಿ ಪಾವೊಲೊ ಲೊರೆಂಜಿ ವಿರುದ್ಧವೂ, ಸ್ಟೆಫಾನೊಸ್‌ ಸಿಟ್ಸಿಪಸ್‌ 6–3, 6–4ರಲ್ಲಿ ಡೆನಿಸ್‌ ಶಪೊವಲೊವ್‌ ಮೇಲೂ, ಗಿಲ್ಲೆಸ್‌ ಮುಲ್ಲರ್‌ 7–5, 6–4ರಲ್ಲಿ ಫ್ಲೋರಿಯನ್‌ ಮೇಯರ್‌ ವಿರುದ್ಧವೂ, ಕೀ ನಿಶಿಕೋರಿ 4–6, 6–2, 6–1ರಲ್ಲಿ ಥಾಮಸ್‌ ಬರ್ಡಿಕ್‌ ಮೇಲೂ ಗೆದ್ದರು.

ಪ್ರತಿಕ್ರಿಯಿಸಿ (+)