ನೀರಾವರಿ, ಕೈಗಾರಿಕಾ ವಲಯಕ್ಕೆ ಆದ್ಯತೆ

7
ಜೆಡಿಎಸ್‌ ಅಭ್ಯರ್ಥಿ ಬಾಲಕೃಷ್ಣ ಭರವಸೆ

ನೀರಾವರಿ, ಕೈಗಾರಿಕಾ ವಲಯಕ್ಕೆ ಆದ್ಯತೆ

Published:
Updated:

ಶ್ರವಣಬೆಳಗೊಳ: ತಾಲ್ಲೂಕಿನ ಅಭಿವೃದ್ಧಿಗೆ ನೀರಾವರಿ ಜೊತೆಗೆ ಬೃಹತ್ ಕೈಗಾರಿಕಾ ವಲಯವನ್ನು ಸ್ಥಾಪಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಶ್ರವಣಬೆಳಗೊಳ ಹೋಬಳಿಯ ನಾಗಯ್ಯನಕೊಪ್ಪಲು, ಸಾಣೇನಹಳ್ಳಿ, ಸಾಣೇನಹಳ್ಳಿ ಕೊಪ್ಪಲು, ಕೋರೇನಹ್ಳಿ, ಕುಂಭೇನಹಳ್ಳಿ ಅರುವನಹಳ್ಳಿ, ಕಂಠೀರಾಯಪುರ, ಕೆ.ಬೊಮ್ಮೇನಹಳ್ಳಿ, ಕೊತ್ತನಘಟ್ಟ, ಮಜ್ಜೇನಹಳ್ಳಿ, ದಮ್ಮನಿಂಗಲ, ಎರೇಕೊಪ್ಪಲು, ಸಾಬರಕೊಪ್ಪಲು, ಡಿ.ಹೊನ್ನೇನಹಳ್ಳಿ, ದಡಿಘಟ್ಟಗಳಲ್ಲಿ ಮತಯಾಚಿಸಿ ಮಾತನಾಡಿದರು.

ಚನ್ನರಾಯಪಟ್ಟಣ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಸುಮಾರು ₹ 1000 ಕೋಟಿ ಬಿಡುಗಡೆ ಮಾಡಲಾಗಿದ್ದು, 150 ಕೋಟಿ ವೆಚ್ಚದ ಹಾಲಿನ ಡೇರಿ ಬಂದಿರುವುದು ತಾಲೂಕಿನ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಕಾರಿಯಾಗಿದೆ. ಈ ಭಾಗದ 22 ಕೆರೆಗಳನ್ನು ತುಂಬಿಸುವ ಶೇ 75 ಭಾಗ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದ ಅಂತರ್ಜಲ ಹೆಚ್ಚಿ ಕುಡಿಯುವ ನೀರು, ತೆಂಗಿನ ತೋಟಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.

ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಪರಮ ದೇವರಾಜೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾ ರಮೇಶ್‌, ಎಪಿಎಂಸಿ ಸದಸ್ಯೆ ಶಿಲ್ಪಾ ಶ್ರೀನಿವಾಸ್‌, ಮುಖಂಡರಾದ ಕೃಷ್ಣೇಗೌಡ, ಹಡೇನಹಳ್ಳಿ ಎಚ್.ಎನ್.ಲೋಕೇಶ್, ಪಿ.ಕೆ.ಮಂಜೇಗೌಡ, ಎ.ಆರ್‌.ಶಿವರಾಜ್‌, ಕಬ್ಬಾಳು ರಮೇಶ್, ಪಾಲಾಕ್ಷ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry