ಬುಧವಾರ, ಆಗಸ್ಟ್ 5, 2020
21 °C
ದಿಟ್ಟ ಆಟ ಆಡಿದ ಸೆಲ್ಟಾ ವಿಗೊ

ಡ್ರಾ ಮಾಡಿಕೊಂಡ ಬಾರ್ಸಿಲೋನಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಡ್ರಾ ಮಾಡಿಕೊಂಡ ಬಾರ್ಸಿಲೋನಾ

ಮ್ಯಾಡ್ರಿಡ್‌: ಒಸಮಾನೆ ಡೆಂಬೆಲ್‌ ಮತ್ತು ಪ್ಯಾಕೊ ಅಲಕ್ಯಾಸೆರ್‌ ಗಳಿಸಿದ ತಲಾ ಒಂದು ಗೋಲುಗಳ ನೆರವಿನಿಂದ ಎಫ್‌ಸಿ ಬಾರ್ಸಿಲೋನಾ ತಂಡ ಲಾ ಲಿಗಾ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಸೋಲಿನಿಂದ ಪಾರಾಯಿತು.

ಬುಧವಾರ ನಡೆದ ಹಣಾಹಣಿಯಲ್ಲಿ ಬಾರ್ಸಿಲೋನಾ 2–2 ಗೋಲುಗಳಿಂದ ಸೆಲ್ಟಾ ವಿಗೊ ವಿರುದ್ಧ ಡ್ರಾ ಸಾಧಿಸಿತು.

ಇದರೊಂದಿಗೆ ಬಾರ್ಸಿಲೋನಾ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ. 33 ಪಂದ್ಯಗಳನ್ನು ಆಡಿರುವ ಈ ತಂಡದ ಖಾತೆಯಲ್ಲಿ 83 ಪಾಯಿಂಟ್ಸ್ ಇವೆ.

ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದ ಬಾರ್ಸಿಲೋನಾ 36ನೇ ನಿಮಿಷದಲ್ಲಿ ಖಾತೆ ತೆರೆಯಿತು. ಒಸಮಾನೆ ಡೆಂಬೆಲ್‌ ಚುರುಕಾಗಿ ಚೆಂಡನ್ನು ಗುರಿ ಸೇರಿಸಿದರು.

45ನೇ ನಿಮಿಷದಲ್ಲಿ ಸೆಲ್ಟಾ ವಿಗೊ ತಂಡದ ಜೊನಾಥನ್‌ ಕ್ಯಾಸ್ಟ್ರೊ ಒಟ್ಟೊ ಗೋಲು ಬಾರಿಸಿ 1–1ರ ಸಮಬಲಕ್ಕೆ ಕಾರಣರಾದರು.

ದ್ವಿತೀಯಾರ್ಧದಲ್ಲಿ ಬಾರ್ಸಿಲೋನಾ ತಂಡ ಪರಿಣಾಮಕಾರಿ ಆಟ ಆಡಿತು. 64ನೇ ನಿಮಿಷದಲ್ಲಿ ಪ್ಯಾಕೊ ಅಲಕ್ಯಾಸೆರ್‌ ಗೋಲು ದಾಖಲಿಸಿದರು. ಹೀಗಾಗಿ ಈ ತಂಡ 2–1ರ ಮುನ್ನಡೆ ತನ್ನದಾಗಿಸಿಕೊಂಡಿತು.

71ನೇ ನಿಮಿಷದಲ್ಲಿ ಬಾರ್ಸಿಲೋನಾ ತಂಡದ ಸರ್ಜಿ ರಾಬರ್ಟೊ, ಎದುರಾಳಿ ತಂಡದ ಆಟಗಾರನನ್ನು ತಳ್ಳಿ ನೆಲಕ್ಕೆ ಬೀಳಿಸಿದ್ದರಿಂದ ಸರ್ಜಿಗೆ ಪಂದ್ಯದ ರೆಫರಿ ಕೆಂಪು ಕಾರ್ಡ್‌ ತೋರಿಸಿ ಅಂಗಳದಿಂದ ಹೊರಗೆ ಕಳುಹಿಸಿದರು. ಹೀಗಾಗಿ ನಂತರದ ಅವಧಿಯಲ್ಲಿ ಬಾರ್ಸಿಲೋನಾ 10 ಮಂದಿಯೊಂದಿಗೆ ಆಡಬೇಕಾಯಿತು.

82ನೇ ನಿಮಿಷದಲ್ಲಿ ಸೆಲ್ಟಾ ತಂಡದ ಇಯಾಗೊ ಆ್ಯಸ್‌ಪಸ್‌ ಗೋಲು ಗಳಿಸಿ 2–2ರ ಸಮಬಲಕ್ಕೆ ಕಾರಣರಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.