7

ಅಪರಾಧಿ ಸಾವು

Published:
Updated:

ಮುಂಬೈ: ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ತಾಹೀರ್ ಮರ್ಚೆಂಟ್‌ ಅಲಿಯಾಸ್ ತಾಹೀರ್ ಟಕ್ಲಾ, ಬುಧವಾರ ಪುಣೆಯಲ್ಲಿ ಮೃತಪಟ್ಟಿದ್ದಾನೆ.

‘ಯರವಾಡ ಜೈಲಿನಲ್ಲಿದ್ದ ತಾಹೀರ್, ಎದೆನೋವಿನಿಂದ ಬಳಲುತ್ತಿದ್ದ. ಅವನನ್ನು ಸಸೂನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ನೀಡುತ್ತಿದ್ದಾಗಲೇ ಅವನು ಮೃತಪಟ್ಟ’ ಎಂದು ಬಂದೀಖಾನೆಗಳ ಹೆಚ್ಚುವರಿ ಮಹಾ ನಿರ್ದೇಶಕ ಡಾ. ಭೂಷಣ್‌ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry