ಆನಂದ್‌ ಸಿಂಗ್‌ ₹125 ಕೋಟಿ, 18 ಐಷಾರಾಮಿ ಕಾರು ಒಡೆಯ

7

ಆನಂದ್‌ ಸಿಂಗ್‌ ₹125 ಕೋಟಿ, 18 ಐಷಾರಾಮಿ ಕಾರು ಒಡೆಯ

Published:
Updated:

ಹೊಸಪೇಟೆ: ವಿಜಯನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆನಂದ್‌ ಸಿಂಗ್‌ ₹125 ಕೋಟಿ ಆಸ್ತಿ ಹೊಂದಿದ್ದಾರೆ. ಅವರು 18 ಐಷಾರಾಮಿ ಕಾರುಗಳ ಒಡೆಯ.

ಆನಂದ್‌ ಸಿಂಗ್‌ ಅವರ ನಾಮಪತ್ರವನ್ನು ಅವರ ಸೂಚಕರಾದ, ಕಾಂಗ್ರೆಸ್‌ ಮುಖಂಡ ಎಲ್‌.ಸಿದ್ದನಗೌಡ ಸಲ್ಲಿಸಿದರು. ಸಿಂಗ್‌ ಅವರು ಇದೇ 24ರೊಳಗೆ ಚುನಾವಣಾಧಿಕಾರಿ ಮುಂದೆ ಹಾಜರಾಗಿ ಪ್ರಮಾಣವಚನ ಸ್ವೀಕರಿಸಬೇಕು. ಇಲ್ಲದಿದ್ದರೆ, ಅವರ ನಾಮಪತ್ರ ತಿರಸ್ಕೃತವಾಗುತ್ತದೆ. ಸಿದ್ದನಗೌಡ ಸಲ್ಲಿಸಿರುವ ನಾಮ ಪತ್ರದಲ್ಲಿ ಆಸ್ತಿ ವಿವರ ಉಲ್ಲೇಖಿಸಲಾಗಿದೆ.

ಆನಂದ್‌ ಸಿಂಗ್‌ ಹೆಸರಿನಲ್ಲಿ ₹25.91 ಕೋಟಿ ಮೌಲ್ಯದ ಚರಾಸ್ತಿ, ₹45 ಕೋಟಿಯ ಸ್ಥಿರಾಸ್ತಿ ಇದೆ. ಅವರ ಪತ್ನಿ ಲಕ್ಷ್ಮಿ ಸಿಂಗ್‌ ₹12 ಕೋಟಿ ಚರಾಸ್ತಿ, ₹28 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಉಳಿದ ಆಸ್ತಿ ಮಕ್ಕಳಾದ ವೈಷ್ಣವಿ, ಸಿದ್ಧಾರ್ಥ ಹಾಗೂ ಯಶಸ್ವಿ ಅವರ ಹೆಸರಿನಲ್ಲಿದೆ.

ಬೆಂಗಳೂರಿನಲ್ಲಿ ಸಿಂಗ್‌ ಅವರಿಗೆ ಸೇರಿದ ₹26.16 ಕೋಟಿ ಮೌಲ್ಯದ ವಾಣಿಜ್ಯ ಸಂಕೀರ್ಣಗಳಿವೆ. ಪತ್ನಿ ಹೆಸರಿನಲ್ಲಿ ಬೆಂಗಳೂರಿನಲ್ಲೇ ₹27.29 ಕೋಟಿ ಮೊತ್ತದ ವಸತಿ ಸಮುಚ್ಚಯಗಳಿವೆ.ಲಕ್ಷ್ಮಿ ಸಿಂಗ್‌ ವಿವಿಧ ಬ್ಯಾಂಕುಗಳಲ್ಲಿ ₹9.58 ಕೋಟಿ ಸಾಲ ಪಡೆದಿದ್ದಾರೆ.

ರೇಂಜ್‌ ರೋವರ್‌, ಬೆಂಜ್‌, ಬೋಟ್‌ ವೊಲ್ವೊ, ಬಿ.ಎಂ.ಡಬ್ಲ್ಯೂ ಸೇರಿದಂತೆ ಸಿಂಗ್‌ ಬಳಿ 18 ಕಾರುಗಳಿವೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಂಗ್‌ ವಿರುದ್ಧ ಹೊಸಪೇಟೆಯ ಸಿವಿಲ್‌ ನ್ಯಾಯಾಲಯದಲ್ಲಿ ಒಂದು, ಸಿಬಿಐ, ಎಸಿಬಿ ನ್ಯಾಯಾಲಯದಲ್ಲಿ 15 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry