ಹಾಕಿ ಉತ್ಸವ: ಅಮ್ಮಾಟಂಡ ತಂಡಕ್ಕೆ ಜಯ

7

ಹಾಕಿ ಉತ್ಸವ: ಅಮ್ಮಾಟಂಡ ತಂಡಕ್ಕೆ ಜಯ

Published:
Updated:

ನಾಪೋಕ್ಲು (ಕೊಡಗು ಜಿಲ್ಲೆ): ಕೊಡವ ಕುಟುಂಬಗಳ ಕುಲ್ಲೇಟಿರ ಹಾಕಿ ಉತ್ಸವದಲ್ಲಿ ಶುಕ್ರವಾರ ಮಂಡೆಯಂಡ ತಂಡದ ವಿರುದ್ಧ ಅಮ್ಮಾಟಂಡ ತಂಡ 4–0 ಅಂತರದಲ್ಲಿ ಜಯ ಗಳಿಸಿತು.

ಇಲ್ಲಿನ ಜನರಲ್‌ ತಿಮ್ಮಯ್ಯಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಮ್ಮಾಟಂಡ ತಂಡದ ಆಟಗಾರರು ಬಿರುಸಿನ ಆಟ ಆಡಿದರು. ಮೇದಪ್ಪ ಎರಡು, ಬೋಪಣ್ಣ, ದೇವಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು.

ಮುದ್ದಿಯಂಡ ತಂಡವು ಕಬ್ಬಚ್ಚೀರ ತಂಡವನ್ನು 2–0 ಅಂತರದಲ್ಲಿ ಮಣಿಸಿತು. ಮಲ್ಲಮಾಡ ತಂಡವು ಕೊರವಂಡದ ವಿರುದ್ಧ 2–0ಯಿಂದ ಗೆದ್ದಿತು. ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಆಟಗಾರ್ತಿ ಮಲ್ಲಮಾಡ ಲೀಲಾವತಿ ಗೋಲು ದಾಖಲಿಸಿದರು. ಕರುಂಬಯ್ಯ ಮತ್ತೊಂದು ಗೋಲು ದಾಖಲಿಸಿ, ತಂಡದ ಗೆಲುವಿಗೆ ನೆರವಾದರು. ನಾಮೇರ ತಂಡವು ಮುಕ್ಕಾಟಿರ ತಂಡವನ್ನು 1–0 ಅಂತರ ದಲ್ಲಿ ಪರಾಭವಗೊಳಿಸಿತು. ನೆರಪಂಡದ ವಿರುದ್ಧ ಕುಟ್ಟಂಡ ತಂಡವು ಜಯಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry