ಸ್ಮಿತ್‌ ಇಂಗ್ಲೆಂಡ್‌ ತಂಡದ ಆಯ್ಕೆಗಾರ

7

ಸ್ಮಿತ್‌ ಇಂಗ್ಲೆಂಡ್‌ ತಂಡದ ಆಯ್ಕೆಗಾರ

Published:
Updated:
ಸ್ಮಿತ್‌ ಇಂಗ್ಲೆಂಡ್‌ ತಂಡದ ಆಯ್ಕೆಗಾರ

ಲಂಡನ್‌: ಹಿರಿಯ ಟೆಸ್ಟ್‌ ಆಟಗಾರ ಎಡ್‌ ಸ್ಮಿತ್‌ ಅವರು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ರಾಷ್ಟ್ರೀಯ ಆಯ್ಕೆಗಾರನಾಗಿ ನೇಮಕವಾಗಿದ್ದಾರೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಶುಕ್ರವಾರ ಈ ವಿಷಯ ತಿಳಿಸಿದೆ.

‘ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ರಾಷ್ಟ್ರೀಯ ಆಯ್ಕೆಗಾರನಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಈ ಜವಾಬ್ದಾರಿ ನೀಡಿದ ಇಸಿಬಿಗೆ ಕೃತಜ್ಞನಾಗಿದ್ದೇನೆ’ ಎಂದು ಸ್ಮಿತ್‌ ಹೇಳಿದ್ದಾರೆ.

40ರ ಹರೆಯದ ಸ್ಮಿತ್‌, ಇಂಗ್ಲೆಂಡ್‌ ಪರ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಆಡಿ 87ರನ್‌ ಗಳಿಸಿದ್ದರು. 191 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 41.79ರ ಸರಾಸರಿಯಲ್ಲಿ 12,789ರನ್‌ ಗಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry