ಬೇನಾಮಿ ಆಸ್ತಿ ತನಿಖೆಗೆ ಒತ್ತಾಯ

7

ಬೇನಾಮಿ ಆಸ್ತಿ ತನಿಖೆಗೆ ಒತ್ತಾಯ

Published:
Updated:

ರಾಯಚೂರು: ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡು ಬೆನಾಮಿ ಹೆಸರಿನಲ್ಲಿ ಮಾಡಿಕೊಂಡಿರುವ ಆಸ್ತಿ ಹಾಗೂ ಹಣದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತನಿಖೆ ನಡೆಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಚಿವ ಹಾಗೂ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮ ಹಾಗೂ ಅವ್ಯವಹಾರಗಳಲ್ಲಿ ತೊಡಗಿ ಗಂಭೀರ ಸ್ವರೂಪದ ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಬಿಡುಗಡೆಗೊಳಿಸಿದರು.

ಅತೀ ಭ್ರಷ್ಟರಾದ ನ್ಯಾ. ಭಾಸ್ಕರರಾವ್‌ ಅವರನ್ನು ಸಾಕಷ್ಟು ವಿರೋಧಗಳ ನಡುವೆಯೂ ಲೋಕಾಯುಕ್ತರನ್ನಾಗಿ ನೇಮಿಸಿ ಲೋಕಾಯುಕ್ತ ಸಂಸ್ಥೆಯನ್ನು ನಿಶ್ಯಕ್ತಿಕ ರಣಗೊಳಿಸಿದ್ದಾರೆ. ಭಾಸ್ಕರರಾವ್‌ ವಿರುದ್ಧದ ಆರೋಪಗಳ ಬಗ್ಗೆ ಅಂದಿನ ರಾಜ್ಯಪಾಲರಿಗೆ ದೂರು ನೀಡಿದರೂ ಲೋಕಾ ಯುಕ್ತರನ್ನಾಗಿ ನೇಮಕ ಮಾಡಿರುವುದರ ಹಿಂದೆಯೂ ಅವ್ಯವಹಾರ ನಡೆದಿದೆ ಎಂದರು.

ಹುಬ್ಬಳ್ಳಿಯ ಹೃದಯಭಾ ಗದಲ್ಲಿರುವ ₹150 ಕೋಟಿ ಬೆಲೆಬಾಳುವ ಸರ್ಕಾರಿ ಭೂಮಿಯನ್ನು ಕೆಲ ಶ್ರೀಮಂತರ ಸಲುವಾಗಿ ರಿಕ್ರಿಯೇಷನ್‌ ಕ್ಲಬ್‌ಗೆ ಕಬಳಿಕೆ ಮಾಡಲಾಗಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕಾಗಿ ರೈತರಿಂದ 600 ಎಕರೆ ಬದಲಾಗಿ

707 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದರಲ್ಲಿ ಇನ್ಫೊಸಿಸ್‌, ದೇಶಪಾಂಡೆ ಫೌಂಡೇಶನ್‌ ಹಾಗೂ ಅನಂತ ರೆಸಿಡೆನ್ಸಿಗೆ ಭೂಮಿ ಹಂಚಿಕೆ ಮಾಡಿ ಸಂಪೂರ್ಣವಾಗಿ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ದೂರಿದರು.

ಇಂತಹ ಭ್ರಷ್ಟರು ಸಾರ್ವಜನಿಕ ಜೀನವದಲ್ಲಿ ಇರಬಾರದು. ಆದ್ದರಿಂದ ದಕ್ಷ ಎಂಜಿನಿಯರ್‌ ಆಗಿರುವ ನೌಕರಿ ಬಿಟ್ಟು ಜನಸೇವೆಗಾಗಿ ಬಂದಿರುವ ಜನಾಂದೋಲನಗಳ ಮಹಾಮೈತ್ರಿಯಿಂದ ಬೆಂಬಲದಿಂದ ಜಗದೀಶ ಶೆಟ್ಟರ್‌ ವಿರುದ್ಧ ಸ್ಪರ್ಧೆ ಮಾಡಿರುವ ಸಂತೋಷ ನರಗುಂದ ಅವರನ್ನು ಆಯ್ಕೆ ಮಾಡಬೇಕು ಎಂದರು.

ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ವಿರುದ್ಧ ಕೈಗೊಂಡಂತೆ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಮ ಆಗುತ್ತಿಲ್ಲ. ಶಾಸಕಾಂಗ ಹಾಗೂ ಕಾರ್ಯಾಂಗದಂತೆ ನ್ಯಾಯಾಂಗದ ಮೇಲೂ ವಿಶ್ವಾಸ ಕಡಿಮೆಯಾಗಿದೆ. ಲಾಲು ಪ್ರಸಾದ್‌ ಯಾದವ್ ಹಾಗೂ ಕಾರ್ತಿ ಚಿದಂಬರಂ ವಿರುದ್ಧ ಕ್ರಮ ಕೈಗೊಳ್ಳಲು ತೋರಿಸುತ್ತಿರುವ ಆಸಕ್ತಿ ಡಿ.ಕೆ.ಶಿವಕುಮಾರ ಪ್ರಕರಣದಲ್ಲಿ ಕಂಡುಬರುತ್ತಿಲ್ಲ. ಆದರೂ ನಿರಂತರವಾಗಿ ಪ್ರಯತ್ನ ಮಾಡಲಾಗುತ್ತಿದ್ದು, ತಡವಾದರೂ ಕ್ರಮವಾಗುವ ಭರವಸೆಯಿದೆ ಎಂದರು.ಖಾಜಾ ಅಸ್ಲಂ, ಜಾನ್‌ ವೆಸ್ಲಿ, ವೀರಣ್ಣ ಶೆಟ್ಟಿ, ಮಲ್ಲಣ್ಣ ದಿನ್ನಿ, ಮಹಾದೇವಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry