ಕಾಯಕಲ್ಪದ ನಿರೀಕ್ಷೆಯಲ್ಲಿ ಖಾಸ ಬಾವಿ

7
ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಪುರಸಭೆಗೆ ನಿವಾಸಿಗಳ ಒತ್ತಾಯ

ಕಾಯಕಲ್ಪದ ನಿರೀಕ್ಷೆಯಲ್ಲಿ ಖಾಸ ಬಾವಿ

Published:
Updated:
ಕಾಯಕಲ್ಪದ ನಿರೀಕ್ಷೆಯಲ್ಲಿ ಖಾಸ ಬಾವಿ

ದೇವದುರ್ಗ: ಪಟ್ಟಣದ ಗೋಪಾಲಸ್ವಾಮಿ ವಾರ್ಡ್‌ನ ಐತಿಹಾಸಕ ಹಿನ್ನೆಲೆಯುಳ್ಳ ಖಾಸ ಬಾವಿಯ ನೀರನ್ನು ನಿತ್ಯವೂ ಸಾವಿರಾರು ಜನರು ಕುಡಿಯುತ್ತಾರೆ. ಆದರೆ ಬಾವಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವಲ್ಲಿ ಮತ್ತು ಸುತ್ತಮುತ್ತಲೂ ಶುಚಿತ್ವ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಖಾಸ ಬಾವಿಗೆ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಬಾವಿಯ ನೀರಿನಲ್ಲಿ ಔಷಧೀಯ ಗುಣವಿದೆ ಎಂದು ಜನರು ನಂಬಿದ್ದಾರೆ. ಗೋಪಾಲಸ್ವಾಮಿ ವಾರ್ಡ್‌ನ ಜನರು ಅಲ್ಲದೇ ಅಕ್ಕಪಕ್ಕದ ಸುಮಾರು ಹತ್ತಾರು ವಾರ್ಡ್‌ಗಳ ಜನರು ಬೆಳಗ್ಗೆ ಮತ್ತು ಸಂಜೆ ವೇಳೆ ಸರದಿಯಲ್ಲಿ ನಿಂತು ಬಾವಿಯಿಂದ ನೀರು ಒಯ್ಯುತ್ತಾರೆ.

ಬಾವಿ ನೀರನ್ನು ಜನರು ನಿತ್ಯವೂ ಕುಡಿಯುತ್ತಾರೆ ಎಂಬ ಅಂಶ ಗೊತ್ತಿದ್ದರೂ ಬಾವಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಪುರಸಭೆ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ. ಬಾವಿಯನ್ನು ಸಂರಕ್ಷಿಸುವ ಮತ್ತು ಶುದ್ಧ ನೀರು ರಕ್ಷಿಸುವ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ ಎಂದು ಜನರು ಆರೋಪಿಸುತ್ತಾರೆ.

‘ಬಾವಿ ಸುತ್ತಮುತ್ತಲೂ ಕೊಳೆ ಶೇಕರಣೆಯಾದರೂ ಅದನ್ನು ತೆಗೆಯುವ ಗೋಜಿಗೆ ಯಾರೂ ಹೋಗಿಲ್ಲ. ನೂರಾರು ವರ್ಷಗಳ ಹಿಂದೆಯೇ ಬಾವಿಯನ್ನು ಕಲ್ಲು ಮತ್ತು ಗಾರಿಯನ್ನು ಬಳಸಿ ಕಟ್ಟಲಾಗಿದೆ. ಆದರೆ ನಿರ್ವಹಣೆ ಇಲ್ಲದ ಕಾರಣ ಬಾವಿಯ ಒಂದು ಭಾಗದ ಗೋಡೆ ಕುಸಿದಿದೆ. ಇದರ ಮೂಲಕ ಅಕ್ಕಪಕ್ಕದದ ನೀರು ಮತ್ತು ಮಳೆಗಾಲದಲ್ಲಿ ಗುಡ್ಡದ ನೀರು ಬಾವಿಗೆ ಸೇರುತ್ತದೆ. ಇದರಿಂದ ನೀರು ಶುದ್ಧವಾಗಿ ಉಳಿಯುವುದಿಲ್ಲ’ ಎಂದು ನಿವಾಸಿಗಳು ತಿಳಿಸಿದರು.

‘ಖಾಸ ಭಾವಿಯನ್ನು ಸಮಪರ್ಕವಾಗಿ ನಿರ್ವಹಿಸುವಂತೆ ವಿವಿಧ ವಾರ್ಡ್‌ಗಳ ಜನರು ಪುರಸಭೆಗೆ ಮನವಿ ಮಾಡಿಕೊಂಡರು. ಅಧಿಕಾರಿಗಳು ಮತ್ತು ಸಿಬ್ಬಂದಿಯ ಗಮನಕ್ಕೆ ತಂದರು. ಆದರೆ ಪರಿಸ್ಥಿತಿಯಲ್ಲಿ ಹೆಚ್ಚೇನೂ ಬದಲಾವಣೆ ಆಗಲಿಲ್ಲ.

ಸಣ್ಣಪುಟ್ಟ ಕಾಮಗಾರಿ ಮತ್ತು ಇನ್ನಿತರ ಕಾರ್ಯಗಳನ್ನು ಜನರೇ ಮಾಡಿದರೂ ಪುಸಭೆಯಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ’ ಎಂದು ನಿವಾಸಿ ಸಂಗಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.

**

ಖಾಸ ಬಾವಿಯ ದುರಸ್ತಿ ಬಗ್ಗೆ ವಾರ್ಡ್‌ಗಳ ಜನರಿಂದ ಬೇಡಿಕೆ ಬಂದಿದೆ. ದುರಸ್ತಿಗೆ ಬಗ್ಗೆ ಕ್ರಿಯಾಯೋಜನೆತಯಾರಿಸಿ ಕಾಮಗಾರಿಗೆ ಕ್ರಮ ಕೈಗೊಳ್ಳುತ್ತೇವೆ – ಫಿರೋಜ್ ಖಾನ್,ಮುಖ್ಯಾಧಿಕಾರಿ, ಪುರಸಭೆ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry