ಬೆಂಬಲಿಗರ ಬಹುಪರಾಕ್‌, ಬಲ ಪ್ರದರ್ಶನ

7
ಶಿರಾ: 6 ಮಂದಿ ನಾಮಪತ್ರ ಸಲ್ಲಿಕೆ

ಬೆಂಬಲಿಗರ ಬಹುಪರಾಕ್‌, ಬಲ ಪ್ರದರ್ಶನ

Published:
Updated:
ಬೆಂಬಲಿಗರ ಬಹುಪರಾಕ್‌, ಬಲ ಪ್ರದರ್ಶನ

ಶಿರಾ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೂರನೇ ದಿನವಾದ ಶುಕ್ರವಾರ ಒಟ್ಟು 6 ನಾಮಪತ್ರಗಳು ಸಲ್ಲಿಕೆಯಾದವು. ಈಗಾಗಲೇ 4 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಒಟ್ಟು 10 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ. ಕಮ್ಯೂನಿಸ್ಟ್ ಪಕ್ಷದಿಂದ ಗಿರೀಶ್, ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಸತ್ಯನಾರಾಯಣ, ಪಕ್ಷೇತರರಾಗಿ ಎಂ.ಚಿದಾನಂದ್, ಎಸ್.ನವೀನ್, ಲಕ್ಷ್ಮಿಕಾಂತ್ ನಾಮಪತ್ರ ಸಲ್ಲಿಸಿದರು. ಸಚಿವ ಟಿ.ಬಿ.ಜಯಚಂದ್ರ ಅವರ ಪರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಞ ಅಲ್ಲಾಭಕಾಷ್ ಪ್ಯಾರು ಹಾಗೂ ಎನ್.ಸಿ.ದೊಡ್ಡಯ್ಯ ನಾಮಪತ್ರ ಸಲ್ಲಿಸಿದರು.

ಬಿ.ಸತ್ಯನಾರಾಯಣ ಹಾಗೂ  ಟಿ.ಬಿ.ಜಯಚಂದ್ರ ಈ ಮೊದಲು ನಾಮಪತ್ರ ಸಲ್ಲಿಸಿದ್ದರೂ ಎರಡನೇ ಬಾರಿಗೆ  ನಾಮಪತ್ರ ಸಲ್ಲಿಸಿದರು.

ಮೆರವಣಿಗೆ: ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಸತ್ಯನಾರಾಯಣ ನಾಮಪತ್ರ ಸಲ್ಲಿಸಿದ ಕಾರಣ ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಅಭಿಮಾನಿಗಳು ಬಂದು ತಮ್ಮ ನಾಯಕನಿಗೆ ಬೆಂಬಲ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.

ನಗರದ ಕೊಳದಪ್ಪಲೇಶ್ವರ ಸ್ವಾಮಿ, ದುರ್ಗಮ್ಮ, ಗಣಪತಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಲ್ಲಿಕ್ ರೆಹಾನ್ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ನಗರದ ಜೆಡಿಎಸ್ ಕಚೇರಿಯಿಂದ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ಬಿ.ಸತ್ಯನಾರಾಯಣ ಎರಡನೇ ಬಾರಿ ನಾಮಪತ್ರ ಸಲ್ಲಿಸಿದರು.

ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್, ಮುಡಿಮಡು ಮಂಜುನಾಥ್, ಕಲ್ಕೆರೆ ರವಿಕುಮಾರ್ ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಮೆರವಣಿಗೆಯಲ್ಲಿ ಇದ್ದರು.

ಸಿಪಿಐ ಅಭ್ಯರ್ಥಿ ನಾಮಪತ್ರ

ಸಿಪಿಐ ಅಭ್ಯರ್ಥಿಯಾಗಿ ಗಿರೀಶ್ ತನ್ನ ಬೆಂಬಲಿ ಗರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು.ಪಕ್ಷೇತರ ಅಭ್ಯರ್ಥಿಯಾಗಿ ಸಿ.ಎಂ.ಸಿ ಪ್ರತಿಷ್ಠಾನದ ಅಧ್ಯಕ್ಷ ಚಿದಾನಂದ್ ಎಂ.ಗೌಡ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.ಎರಡನೇ ಬಾರಿ ಶನಿವಾರ ತನ್ನ ಬೆಂಬಲಿಗರೊಂದಿಗೆ ಬಂದು ಮತ್ತೆ ನಾಮಪತ್ರ ಸಲ್ಲಿಸುವುದಾಗಿ ಚಿದಾನಂದ ಗೌಡ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry