ಶುಕ್ರವಾರ, ಏಪ್ರಿಲ್ 23, 2021
31 °C

ಡಯಾನಾ ಹೇಡನ್‌ ವಿಶ್ವ ಸುಂದರಿ ಎನ್ನುವುದು ಜೋಕ್‌: ತ್ರಿಪುರ ಸಿಎಂ ಹೇಳಿಕೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಡಯಾನಾ ಹೇಡನ್‌ ವಿಶ್ವ ಸುಂದರಿ ಎನ್ನುವುದು ಜೋಕ್‌: ತ್ರಿಪುರ ಸಿಎಂ ಹೇಳಿಕೆ

ಅಗರ್ತಲಾ (ತ್ರಿಪುರ): ‘ಡಯಾನಾ ಹೇಡನ್‌ ವಿಶ್ವ ಸುಂದರಿ ಎನ್ನುವುದು ಕೇವಲ ಜೋಕ್‌’ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್‌ ದೇಬ್‌ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದ ಪ್ರಜ್ಞಾ ಭವನದಲ್ಲಿ ಆಯೋಜಿಸಿದ್ದ ಕರಕುಶಲ ವಿನ್ಯಾಸ ಮತ್ತು ಕೈಮಗ್ಗ ಕಾರ್ಯಾಗಾರದಲ್ಲಿ ಅವರು ಮಾತನಾಡಿದ ಅವರು, ‘ನಟಿ ಐಶ್ವರ್ಯಾ ರೈ ಅವರು ಭಾರತದ ಅದ್ಭುತ ಸುಂದರಿ. ದೇವತೆಯರಾದ ಲಕ್ಷ್ಮಿ, ಸರಸ್ವತಿಯಂತೆ ಕಾಣುತ್ತಾರೆ. ದೇಶದ ಮಹಿಳೆಯರನ್ನು ಪ್ರತಿನಿಧಿಸುವ ಹಕ್ಕು ಅವರಿಗಿದೆ. ಆದರೆ ಡಯಾನಾ ಹೇಡನ್‌ ಈ ವರ್ಗಕ್ಕೆ ಸೇರುವುದಿಲ್ಲ’ ಎಂದು ಹೇಳಿದ್ದಾರೆ.

ಇಂದು ದೇಶದಲ್ಲಿ ಬ್ಯೂಟಿ ಪಾರ್ಲರ್‌ಗಳ ಸಂಖ್ಯೆ ಹೆಚ್ಚಿದೆ. ಅದೊಂದು ಉದ್ಯಮವಾಗಿದೆ ಎಂದು ಹೇಳಿದ್ದಾರೆ.

1997ರಲ್ಲಿ ನಡೆದ ವಿಶ್ವ ಸೌಂದರ್ಯ ಸ್ಪರ್ಧೆಯಲ್ಲಿ ಡಯಾನಾ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು. 2017 ರಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಹರಿಯಾಣದ ವೈದ್ಯಕೀಯ ವಿದ್ಯಾರ್ಥಿನಿ ಮಾನುಷಿ (20), ‘ವಿಶ್ವ ಸುಂದರಿ’ ಆಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ...

ಮಹಾಭಾರತದ ಕಾಲದಲ್ಲಿ ಇಂಟರ್ನೆಟ್, ವೈಫೈ ಎಲ್ಲೆಲ್ಲಿ ಬಳಕೆಯಲ್ಲಿತ್ತು ಗೊತ್ತಾ?!

ಉತ್ತರಕ್ಕೆ ಒಲಿದ ಕಿರೀಟ

ಭಾರತದ ಮಾನುಷಿ ಛಿಲ್ಲರ್‌ಗೆ ‘ವಿಶ್ವ ಸುಂದರಿ’ ಕಿರೀಟ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.