ಅಗ್ರಸ್ಥಾನದಲ್ಲಿ ಅಜಿತೇಶ್‌ ಸಂಧು

7
ಗಾಲ್ಟೆಕ್ಸ್‌ ಮೇಕ್ಯುಂಗ್‌ ಓಪನ್‌ ಗಾಲ್ಫ್‌ ಚಾಂಪಿಯನ್‌ಷಿಪ್‌

ಅಗ್ರಸ್ಥಾನದಲ್ಲಿ ಅಜಿತೇಶ್‌ ಸಂಧು

Published:
Updated:
ಅಗ್ರಸ್ಥಾನದಲ್ಲಿ ಅಜಿತೇಶ್‌ ಸಂಧು

ಸೆಂಗ್‌ನಮ್‌, ಕೊರಿಯಾ: ಭಾರತದ ಅಜಿತೇಶ್ ಸಂಧು ಅವರು ಇಲ್ಲಿ ನಡೆಯುತ್ತಿರುವ ಜಿ.ಎಸ್‌.ಗಾಲ್ಟೆಕ್ಸ್‌ ಮೇಕಾಂಗ್‌ ಓಪನ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಮರ್ಥ್ಯ ಮೆರೆದಿದ್ದಾರೆ.

ಮೊದಲ ಸುತ್ತಿನ ಮುಕ್ತಾಯದ ನಂತರ ಉತ್ತಮ ಸ್ಕೋರ್ ಕಲೆ ಹಾಕಿರುವ ಅವರು ಅಗ್ರಸ್ಥಾನದ‌ಲ್ಲಿದ್ದಾರೆ. ಭಾರತದ ಮತ್ತೊಬ್ಬ ಆಟಗಾರ ಶಿವ ಕಪೂರ್‌ ಐದನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಚಿಕ್ಕರಂಗಪ್ಪ ಮತ್ತು ಗಗನ್‌ ಜೀತ್‌ ಭುಲ್ಲಾರ್‌ 33ನೇ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.

ಜೀವ್ ಮಿಲ್ಕಾ ಸಿಂಗ್‌ 70ನೇ ಸ್ಥಾನದಲ್ಲಿದ್ದರೆ ಅರ್ಜುನ್‌ ಅಠವಾಲ್‌ ಮತ್ತು ಜ್ಯೋತಿ ರಾಂಧವಾ 87ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಕಾಲಿನ್ ಜೋಶಿ 100ನೇ ಸ್ಥಾನದಲ್ಲಿದ್ದಾರೆ.

ಕೊರಿಯಾದ ಹೆಂಗ್‌ಚೋಲ್ ಜೂ, ಲೀ ಡಾಂಗ್ ಹಾ ಮತ್ತು ಜೇ ಬುಮ್ ಪಾರ್ಕ್‌ ಅವರು ಸಂಧುಗೆ ಗುರುವಾರ ಭಾರಿ ಪೈಪೋಟಿ ನೀಡಿದರು.

ಆದರೆ  ಎದುರಾಳಿಗಳ ಸವಾಲು ಎದುರಿಸಿದ ಸಂಧು ಉತ್ತಮವಾಗಿ ಆಡಿ ಅಗ್ರಸ್ಥಾನ ಕಾಯ್ದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry