ಶನಿವಾರ, ಫೆಬ್ರವರಿ 27, 2021
31 °C
ಉನ್ನತ ಶಿಕ್ಷಣ, ಹೊಸ ಉದ್ದಿಮೆ ಆರಂಭಿಸಲು ನೆರವು

ಎನ್‌ಪಿಎಸ್‌: ಭಾಗಶಃ ವಾಪಸ್ ಸೌಲಭ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ಎನ್‌ಪಿಎಸ್‌: ಭಾಗಶಃ ವಾಪಸ್ ಸೌಲಭ್ಯ

ನವದೆಹಲಿ: ಉನ್ನತ ಶಿಕ್ಷಣ ಪಡೆಯಲು ಮತ್ತು ಹೊಸ ಉದ್ದಿಮೆ ವಹಿವಾಟು ಆರಂಭಿಸಲು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (ಎನ್‌ಪಿಎಸ್‌) ಹೂಡಿಕೆ ಮಾಡಿದ ಭಾಗಶಃ ಮೊತ್ತವನ್ನು ಮರಳಿ ಪಡೆಯಲು ಚಂದಾದಾರರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

‘ಎನ್‌ಪಿಎಸ್‌’ ಚಂದಾದಾರರು ಉನ್ನತ ವ್ಯಾಸಂಗದ ಮೂಲಕ ತಮ್ಮ ವೃತ್ತಿ ಕೌಶಲ ಹೆಚ್ಚಿಸಿಕೊಳ್ಳಲ ಮತ್ತು  ಹೊಸ ಉದ್ದಿಮೆ ಆರಂಭಿಸಲು, ಹೊಸ ವಹಿವಾಟು ಸ್ವಾಧೀನಪಡಿಸಿಕೊಳ್ಳಲು ತಾವು ಹೂಡಿಕೆ ಮಾಡಿದ ಹಣದಲ್ಲಿ ಭಾಗಶಃ ಮೊತ್ತವನ್ನು ವಾಪಸ್‌ ಪಡೆದುಕೊಳ್ಳಬಹುದಾಗಿದೆ.

ಪಿಂಚಣಿ ನಿಧಿ ಮತ್ತು ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ನಿರ್ದೇಶಕ ಮಂಡ ಳಿಯು ಈ ನಿರ್ಧಾರ ಕೈಗೊಂಡಿದೆ. ‘ಎನ್‌ಪಿಎಸ್‌’, ಕೇಂದ್ರ ಸರ್ಕಾ ರದ ಸಾಮಾಜಿಕ ಸುರಕ್ಷತಾ ಕಾರ್ಯಕ್ರಮವಾಗಿದೆ.

ಈ ಯೋಜನೆಯ ಚಂದಾದಾರರಿಗೆ ‘ಆಟೊ ಚಾಯಿಸ್‌’ ಮತ್ತು ‘ಆ್ಯಕ್ವಿವ್‌ ಚಾಯಿಸ್‌’ ಹೆಸರಿನ ಎರಡು ಬಗೆಯ ಹೂಡಿಕೆ ಆಯ್ಕೆ ಅವಕಾಶಗಳನ್ನು ಒದಗಿಸಲಾಗುತ್ತದೆ. ‘ಆ್ಯಕ್ಟಿವ್‌ ಚಾಯಿಸ್‌’ ಆಯ್ಕೆ ಮಾಡಿಕೊಂಡವರು, ಮೂರು ನಿಯಮಿತ ಹೂಡಿಕೆಗಳಾದ ಷೇರು, ಸರ್ಕಾರಿ ಸಾಲಪತ್ರ ಮತ್ತು ಕಾರ್ಪೊರೇಟ್‌ ಬಾಂಡ್‌ಗಳ ಜತೆಗೆ ‘ಪರ್ಯಾಯ ಹೂಡಿಕೆ ನಿಧಿ’ಯಲ್ಲಿ ಶೇ 5ರಷ್ಟು ಹೂಡಿಕೆ ಮಾಡಬಹುದು.

‘ಆ್ಯಕ್ಟಿವ್‌ ಚಾಯಿಸ್‌’ ವಿಭಾಗದಲ್ಲಿ, ಖಾಸಗಿ ವಲಯದ ಚಂದಾದಾರರ ಷೇರುಗಳ ಹೂಡಿಕೆ ಮೇಲಿನ ಮಿತಿಯನ್ನು ಸದ್ಯದ ಶೇ 50 ರಿಂದ ಶೇ 75ರವರೆಗೆ ಹೆಚ್ಚಿಸಲಾಗಿದೆ. ಷೇರುಗಳಲ್ಲಿನ ಈ ಹೂಡಿಕೆ ಹೆಚ್ಚಳ ಸೌಲಭ್ಯವು ಚಂದಾದಾರರಿಗೆ 50 ವರ್ಷಗಳು ಆಗುವವರೆಗೆ ಲಭ್ಯ ಇರಲಿದೆ.

ಸದ್ಯಕ್ಕೆ ಎನ್‌ಪಿಎಸ್‌ ಮತ್ತು ಅಟಲ್‌ ಪಿಂಚಣಿ ಯೋಜನೆಗಳನ್ನು (ಎಪಿವೈ) ‘ಪಿಎಫ್‌ಆರ್‌ಡಿಎ’ ನಿಯಂತ್ರಿಸುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.