ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಯ ಮಾನ ಕಳೆದ ಕಾಂಗ್ರೆಸ್: ಮೋದಿ

ಇದು ಕಳ್ಳರು, ಲೂಟಿಕೋರರ ಜಿಲ್ಲೆಯೇ?
Last Updated 4 ಮೇ 2018, 6:57 IST
ಅಕ್ಷರ ಗಾತ್ರ

ಬಳ್ಳಾರಿ: ‘ಗೌರವಪೂರ್ಣ ಇತಿಹಾಸ, ಪರಂಪರೆ ಮತ್ತು ಅಪಾರ ಪ್ರಾಕೃತಿಕ ಸಂಪತ್ತುಳ್ಳ ಬಳ್ಳಾರಿಯನ್ನು, ಕಳ್ಳರು ಹಾಗೂ ಲೂಟಿಕೋರರಿರುವ ಜಿಲ್ಲೆ ಎಂದು ಕಾಂಗ್ರೆಸ್‌ ಸರ್ಕಾರ ದೇಶ–ವಿದೇಶದಲ್ಲಿ ಅಪಪ್ರಚಾರ ಮಾಡಿದೆ. ಆದರೆ ಬಿಜೆಪಿಯ ಕೇಂದ್ರ ಸರ್ಕಾರ ₹50 ನೋಟಿನ ಮೇಲೆ ಹಂಪಿಯ ಚಿತ್ರವನ್ನು (ಕಲ್ಲಿನ ರಥ) ಮುದ್ರಿಸಿ ವಿಶ್ವಖ್ಯಾತಿ ತಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

ನಗರದಲ್ಲಿ ಗುರುವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಅತ್ಯಾಚಾರಿಗಳಿಗೆ, ಆಕ್ರಮಣಕಾರರಿಗೆ ಎಂಥ ಶಿಕ್ಷೆ ನೀಡಬೇಕು ಎಂಬುದನ್ನು ವಿಜಯನಗರ ಸಾಮ್ರಾಜ್ಯ ತೋರಿಸಿಕೊಟ್ಟಿದೆ. ಆದರೆ, ಆ ಇತಿಹಾಸವನ್ನು ಕಾಂಗ್ರೆಸ್‌ ತನ್ನ ರಾಜನೀತಿಗಾಗಿ ಹಾಳು ಮಾಡಿದೆ. ಇದು ಜಿಲ್ಲೆಯ ಜನರಿಗೆ ಮಾಡಿದ ಅವಮಾನ’ ಎಂದರು.

ಈ ಸಂದರ್ಭದಲ್ಲಿ ಜನರ ಉದ್ಗಾರ, ಕೂಗುಗಳನ್ನು ಕಂಡ ಮೋದಿ, ಭಾಷಣದ ಅನುವಾದಕರ ಕಡೆ ತಿರುಗಿ, ‘ನಾನು ಹೇಳಿದ್ದು ಜನರಿಗೆ ಸರಿಯಾಗಿ ಅರ್ಥವಾಗಿದೆ’ ಎಂದು ನಕ್ಕರು.

ಸಿದ್ದಾ ರುಪಾಯ್‌ ಸರ್ಕಾರ:

‘ರಾಜ್ಯದಲ್ಲಿರುವುದು ಸಿದ್ದಾ ರುಪಾಯ್ ಸರ್ಕಾರ’ ಎಂದು ಲೇವಡಿ ಮಾಡಿದ ಪ್ರಧಾನಿ, ‘ಕರ್ನಾಟಕವನ್ನು ಕಾಂಗ್ರೆಸ್‌ ಸಾಲದಲ್ಲಿ ಮುಳುಗಿಸಿದೆ. ಆದರೆ ಸಚಿವರ ಖಜಾನೆ ಮಾತ್ರ ಭರ್ತಿಯಾಗುತ್ತಿದೆ. ಜಿಲ್ಲೆಯ ಹಾಗೂ ರಾಜ್ಯದ ಜನ ಅದರ ಒಂದೊಂದು ಪೈಸೆಯ ಲೆಕ್ಕವನ್ನೂ ಕೇಳಬೇಕು’ ಎಂದರು.

ಪಾದಯಾತ್ರೆಯ ನಾಟಕ:

‘ಐದು ವರ್ಷದ ಅವಧಿಯಲ್ಲಿ ಕಾಂಗ್ರೆಸ್‌ ಸರಿಯಾದ ಒಂದು ಗಣಿ ನೀತಿಯನ್ನು ರೂಪಿಸಲಿಲ್ಲ. ಆದರೆ ಅಕ್ರಮ ಗಣಿಕಾರಿಕೆ ವಿರುದ್ಧ ಪಾದಯಾತ್ರೆಯ ನಾಟಕ ಮಾಡಿದ್ದವರು, ಕುಳಿತ ಸ್ಥಳದಲ್ಲೇ ತಮ್ಮ ಭರವಸೆಗಳೆಲ್ಲವನ್ನು ಮರೆತು ಬಿಟ್ಟರು’ ಎಂದು ವ್ಯಂಗ್ಯವಾಡಿದರು.

‘ಪ್ರಧಾನ ಮಂತ್ರಿ ಖನಿಜ ಕಲ್ಯಾಣ ಯೋಜನೆ ಅಡಿ ಸಂಗ್ರಹಗೊಂಡಿರುವ ₹9 ಸಾವಿರ ಕೋಟಿಯಲ್ಲಿ ಸರ್ಕಾರ ಕೇವಲ ₹37 ಲಕ್ಷ ಬಳಸಿದೆ. ನಿದ್ದೆ ಮಾಡುವ ಮುಖ್ಯಮಂತ್ರಿ ಮತ್ತು ನಿದ್ದೆ ಹೋಗಿರುವ ಸರ್ಕಾರ ಹಣವನ್ನು ತುಂಗಭದ್ರಾ ಜಲಾಶಯದ ಹೂಳು ತೆಗೆಯಲು ಬಳಸಿದ್ದರೆ ಜಿಲ್ಲೆಯ ಜನ ನೀರಿಲ್ಲದೆ ಸಾಯುತ್ತಿರಲಿಲ್ಲ. ಇಲ್ಲಿನ ಜನರ ಜೀವಾಳವಾಗಿರುವ ಜೀನ್ಸ್ ಉದ್ಯಮಕ್ಕೆ ಸರ್ಕಾರ ಉತ್ತೇಜನ ನೀಡಲಿಲ್ಲ. ಹೀಗಾಗಿ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ’ ಎಂದರು.

‘1999ರಲ್ಲಿ ಲೋಕಸಭಾ ಚುನಾವಣೆಗೆ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಘೋಷಿಸಿದ್ದ ₹3 ಸಾವಿರ ಕೋಟಿ ವೆಚ್ಚದ ಪ್ಯಾಕೇಜ್‌ ಅನ್ನು ರಾಜ್ಯ ಸರ್ಕಾರ ಮರೆತು ಬಿಟ್ಟತು’ ಎಂದು ಟೀಕಿಸಿದರು.

‘ಬಿಜೆಪಿಯು ಬ್ರಾಹ್ಮಣವಾದಿ ಪಕ್ಷ, ದಲಿತರು, ಮಹಿಳೆಯರು ಮತ್ತು ಮುಸಲ್ಮಾನರ ವಿರೋಧಿ. ಉತ್ತರ ಭಾರತದವರಿಗೆ ಮಣೆ ಹಾಕುತ್ತದೆ. ಹಿಂದೆ ಭಾಷೆಯೇ ಅಲ್ಲಿ ಪ್ರಧಾನ ಎಂದು ಕಾಂಗ್ರೆಸ್‌ ಯಾವಾಗಲೂ ದೂರುತ್ತಿರುತ್ತದೆ. ಆದರೆ ನೋಡಿ, ಮುಸಲ್ಮಾನರಾದ ಅಬ್ದುಲ್‌ಕಲಾಂ ಅವರನ್ನು ಬಿಜೆಪಿ ರಾಷ್ಟ್ರಪತಿಯಾಗಿಯನ್ನಾಗಿಸಿತ್ತು. ದಲಿತ ರಾಮನಾಥ್‌ ಕೋವಿಂದ್‌ ಅವರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಕರ್ನಾಟಕದಿಂದಲೇ ಹಲವು ಬಾರಿ ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿದ್ದ ದಕ್ಷಿಣ ಭಾರತದ ಎಂ.ವೆಂಕಯ್ಯನಾಯ್ಡು ಈಗ ಉಪರಾಷ್ಟ್ರಪತಿ. ದೇಶದ ಮೊದಲ ಮಹಿಳಾ ರಕ್ಷಣಾ ಮಂತ್ರಿಯಾಗಿರುವ ನಿರ್ಮಲಾ ಸೀತಾರಾಮನ್‌ ತಮಿಳುನಾಡಿನವರು. ಹಿಂದುಳಿದ ವರ್ಗದ ಚಾಯ್‌ವಾಲಾ ಈಗ ದೇಶದ ಪ್ರಧಾನಿ, ಹೀಗೆ ಪ್ರತಿ ಆಯ್ಕೆಯ ಸಂದರ್ಭದಲ್ಲೂ ಕಾಂಗ್ರೆಸ್‌ನ ನಿರೀಕ್ಷೆಯ ಡಬ್ಬಾ ಉಲ್ಟಾ ಆಗಿ ಸದ್ದು ಮಾಡಿದೆ’ ಎಂದು ಲೇವಡಿ ಮಾಡಿದರು.

ಅಗತ್ಯ ಬಿದ್ದರೆ ದಳ ದಳ!

ಬಳ್ಳಾರಿ: ಸಿದ್ದರಾಮಯ್ಯ ಅವರ ಪಕ್ಷಾಂತರ ಚರಿತ್ರೆಯ ಕುರಿತು ಉಲ್ಲೇಖಿಸಿದ ನರೇಂದ್ರ ಮೋದಿ, ‘ಎಂಟು ಕೆರೆಯ ನೀರು ಕುಡಿದಿರುವ ಸಿದ್ದರಾಮಯ್ಯ ಒಮ್ಮೆ ಲೋಕದಳ, ಮತ್ತೊಮ್ಮೆ ಜನತಾ ದಳದಲ್ಲಿದ್ದರು. ಅಗತ್ಯ ಬಿದ್ದರೆ ಅವರು ದಳ ದಳ ಎಂಬುದನ್ನೂ ಸೇರಿಬಿಡುತ್ತಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT