ಟ್ವಿಟರ್‌ ಪಾಸ್‌ವರ್ಡ್‌ಗಳಲ್ಲಿ ದೋಷ: ಪಾಸ್‌ವರ್ಡ್‌ ಬದಲಿಸುವಂತೆ ಬಳಕೆದಾರರಲ್ಲಿ ಮನವಿ

7

ಟ್ವಿಟರ್‌ ಪಾಸ್‌ವರ್ಡ್‌ಗಳಲ್ಲಿ ದೋಷ: ಪಾಸ್‌ವರ್ಡ್‌ ಬದಲಿಸುವಂತೆ ಬಳಕೆದಾರರಲ್ಲಿ ಮನವಿ

Published:
Updated:
ಟ್ವಿಟರ್‌ ಪಾಸ್‌ವರ್ಡ್‌ಗಳಲ್ಲಿ ದೋಷ: ಪಾಸ್‌ವರ್ಡ್‌ ಬದಲಿಸುವಂತೆ ಬಳಕೆದಾರರಲ್ಲಿ ಮನವಿ

ಸ್ಯಾನ್ ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ಜಾಲತಾಣ ಟ್ಟಿಟರ್ ನಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಬಳಕೆದಾರರು ಕೂಡಲೇ ತಮ್ಮ ಖಾತೆಗಳ ಪಾಸ್‌ವರ್ಡ್‌ಗಳನ್ನು ಬದಲಿಸುವಂತೆ ಟ್ವಿಟರ್ ಮನವಿ ಮಾಡಿದೆ.

ಟ್ವಿಟರ್ ನಲ್ಲಿ ಗುರುವಾರ ದೋಷವೊಂದು (ಬಗ್‌) ಪತ್ತೆಯಾಗಿತ್ತು, ಅದು ಪಾಸ್‌ವರ್ಡ್‌ಗಳಿಗೆ ಸಂಬಂಧಿಸಿದ ಬಗ್ ಆಗಿತ್ತು. ಅದನ್ನು ಕೂಡಲೇ ಸರಿಪಡಿಸಲಾಗಿದೆ. ಸುಮಾರು 3.30 ಕೋಟಿಗೂ ಹೆಚ್ಚು ಬಳಕೆದಾರರು ಮುಂಜಾಗ್ರತ ಕ್ರಮವಾಗಿ ತಮ್ಮ ವೈಯಕ್ತಿಕ ಪಾಸ್‌ವರ್ಡ್‌ಗಳು ಮತ್ತು ಗ್ರೂಪ್‌ ಪಾಸ್‌ವರ್ಡ್‌ಗಳನ್ನು ಬದಲಿಸುವಂತೆ ಟ್ವಿಟರ್ ಮನವಿ ಮಾಡಿಕೊಂಡಿದೆ.

ಬಳಕೆದಾರರ ಯಾವುದೇ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿಲ್ಲ ಹಾಗೇ ಯಾವುದೇ ನಿಯಮಗಳು ಉಲ್ಲಂಘನೆಯಾಗಿಲ್ಲ ಬಗ್ ದೋಷವನ್ನು ಸರಿಪಡಿಸಲಾಗಿದೆ ಎಂದು ಟ್ವಟರ್‌ನ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಜಾಕ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry