ಶುಕ್ರವಾರ, 26 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರೇ ನೀವೇ ಹೀಗೆ ಮಾಡಿದರೆ ಹೇಗೆ?

Last Updated 4 ಮೇ 2018, 9:43 IST
ಅಕ್ಷರ ಗಾತ್ರ

ಬೆಂಗಳೂರು: ಚಾಮರಾಜನಗರ ಜಿಲ್ಲೆ ಸಂತೇಮರಹಳ್ಳಿ ಸಮೀಪದ ಬನಹಟ್ಟಿ ಗೇಟ್‌ನಲ್ಲಿ ಪೊಲೀಸ್ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪೊಲೀಸರು ಪರಾರಿಯಾಗಿದ್ದಾರೆ. ಕೆಲ ಸಮಯದ ನಂತರ ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಜನರೊಂದಿಗೆ ನಡೆದುಕೊಂಡಿರುವ ರೀತಿ ಜನರಲ್ಲಿ ಆಕ್ರೋಶ ಹುಟ್ಟುಹಾಕಿದೆ.

ಹಿರಿಯ ಅಧಿಕಾರಿಗಳು ಜನರೊಂದಿಗೆ ನಡೆದುಕೊಂಡಿರುವ ರೀತಿಯನ್ನು ಅಂಕಣಕಾರ್ತಿ ಪಿ. ಕುಸುಮಾ ಆಯರಹಳ್ಳಿ 'ಇವರು ಪೋಲೀಸೋ ರೌಡಿಗಳೋ?' ಎಂದು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.

'ಇದು ಈಗ್ಗೆ ಕೆಲ ಹೊತ್ತಿನ ಹಿಂದೆ ನಡೆದ ಘಟನೆ. ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ಬಳಿ ಮೈಸೂರು ರಸ್ತೆಯಲ್ಲಿ ಪೋಲೀಸ್ ವಾಹನ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿದೆ. ವ್ಯಕ್ತಿ ಕೆಳಗೆ ಬಿದ್ದಿದ್ದಾರೆ. ಪೋಲೀಸ್ ವಾಹನ ಹೊಲದೊಳಗೆ ನುಗ್ಗಿದೆ. ಅಷ್ಟರಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಜನವೂ ನಿಂತಿದ್ದಾರೆ. ಬಿದ್ದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ಕೊಡಿಸುವ ಕನಿಷ್ಠ ಸೌಜನ್ಯ ತೋರಿಸದ ಪೋಲೀಸರು ಯಾವುದೋ ಬಸ್ಸತ್ತಿ ಓಡಿಹೋಗಿದ್ದಾರೆ. ಆಸ್ಪತ್ರೆ ಸೇರಿದ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ' ಎಂದು ಕುಸುಮಾ ಹೇಳಿದ್ದಾರೆ.

'ಸ್ಥಳಕ್ಕೆ ಬಂದ ಡಿವೈಎಸ್‌ಪಿ ಜಯಕುಮಾರ್ ತಪ್ಪು ಒಪ್ಪಿಕೊಳ್ಳೋದು ಬಿಡಿ, ಅತ್ಯಂತ ದುರಹಂಕಾರದಿಂದ ಜನರೊಂದಿಗೆ ವರ್ತಿಸಿದ್ದಾರೆ. ಏನ್ಮಾಡ್ಕೋತೀರ ಮಾಡ್ಕೊಳಿ ಹೋಗಿ ಅನ್ನೋದು ಜನರಿಗೆ ಇವರ ಆವಾಜು. ಪ್ರಶ್ನೆ ಮಾಡಿದವರನ್ನು 'ಏ ಇವನ‌ ಫೊಟೋ ತೆಕ್ಕೊಳ್ರೋ' ಅಂತಾರೆ. ಇದ್ಯಾವ ಥರ ದಬ್ಬಾಳಿಕೆ? ಇವರಿಗೆ ಲಾಠಿ ಬೀಸೋರ್ಯಾರು?' ಎಂದು ಅವರು ಪ್ರಶ್ನಿಸಿದ್ದಾರೆ.

ಘಟನೆಯ ವಿವರ:

ಸಂತೇಮರಹಳ್ಳಿ ಮೈಸೂರು ರಸ್ತೆಯ ಬಸವಟ್ಟಿ ಗೇಟ್ ಸಮೀಪ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಶಂಭು (ಚಿಕ್ಕಣ್ಣ) ಅವರ ವಾಹನವು ಪೊಲೀಸ್ ಜೀಪ್‌ಗೆ ಮುಖಾಮುಖಿಯಾಯಿತು. ಈ ಸಂದರ್ಭ ಚಾಲಕನ ನಿಯಂತ್ರಣ ಕಳೆದುಕೊಂಡು ಪೊಲೀಸ್ ಜೀಪ್ ಹೊಲಕ್ಕೆ ನುಗ್ಗಿತು. ಸುತ್ತಲಿದ್ದ ಜನರು ಸ್ಥಳಕ್ಕೆ ಧಾವಿಸಿದರು.

‘ಜೀಪ್‌ನಲ್ಲಿದ್ದ ಹಿರಿಯ ಅಧಿಕಾರಿ ಸೇರಿದಂತೆ ನಾಲ್ಕೈದು ಪೊಲೀಸ್‌ ಸಿಬ್ಬಂದಿ ತಕ್ಷಣ ಕೆಳಗಿಳಿದು ರಸ್ತೆಗೆ ಓಡಿ ಬಂದು ಬಸ್ ಹತ್ತಿ ಪರಾರಿಯಾದರು’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗ್ರಾಮಸ್ಥರು ಗಾಯಾಳುವನ್ನು ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಗೆ ಸೇರಿಸಿದರು. ಅದರೆ ಶಂಭು ಅವರ ಪ್ರಾಣ ಉಳಿಯಲಿಲ್ಲ.

‘ಗಾಯಾಳುವಿಗೆ ಏನಾಗಿದೆ ಎಂದು ನೋಡದೆ ಪೊಲೀಸರೇ ಓಡಿಹೋದರೆ ಹೇಗೆ? ಸಕಾಲದಲ್ಲಿ ಚಿಕಿತ್ಸೆ ಲಭಿಸಿದ್ದರೆ ಶಂಭು ಅವರ ಪ್ರಾಣ ಉಳಿಯುತ್ತಿತ್ತು’ ಎನ್ನುವುದು ಗ್ರಾಮಸ್ಥರ ಆಕ್ರೋಶದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT