ಕನ್ನಡದವರಾದರೂ ತೆಲುಗು, ತಮಿಳು, ಮಲಯಾಳಂ ಚಿತ್ರರಂಗಳಲ್ಲಿ ಹೆಸರು ಗಳಿಸಿದವರು ನಟಿ ಲಕ್ಷ್ಮೀ ರೈ. ಸದ್ಯ ‘ಜೂಲಿ– 2’ ಸಿನಿಮಾದ ಮೂಲಕ ನಾಯಕಿಯಾಗಿ ಬಾಲಿವುಡ್‌ಗೆ ಪ್ರವೇಶ ಮಾಡಿರುವ ನಟಿ 29ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ (ಮೇ 5, 1989).2005ರಲ್ಲಿ ತಮಿಳು ಚಿತ್ರ ‘ಕರಕ ಕಸದರ’ ಎಂಬ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಎಂಟ್ರಿ ಪಡೆದ ಅವರು, ‘ಕುಂಡಕ್ಕ ಮಂಡಕ್ಕ’, ‘ಧರ್ಮಪುರಿ’, ‘ನೆಂಜೈ ತೋಡು’ ಸೇರಿದಂತೆ ಹಾಸ್ಯ, ರೋಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೇ ಮಲಯಾಳಂ ಸಿನಿಮಾದಲ್ಲೂ ಮೋಹನ್‌ಲಾಲ್ ಸೇರಿದಂತೆ ಅನೇಕ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ.

ಲಕ್ಷ್ಮೀ ರೈಗೆ ಹೆಸರು ತಂದುಕೊಟ್ಟಿದ್ದು ತಮಿಳು ಚಿತ್ರ ‘ಕಾಂಚನ’. ಈ ಚಿತ್ರದ ಕನ್ನಡ ಅವತರಣಿಕೆಯೇ ಕಲ್ಪನಾ. ಈ ಚಿತ್ರದ ಕನ್ನಡ ಹಾಗೂ ತಮಿಳು ಎರಡೂ ಅವತರಣಿಯಲ್ಲೂ ಅವರೇ ನಾಯಕಿಯಾಗಿ ನಟಿಸಿದ್ದಾರೆ. ವಾಲ್ಮೀಕಿ, ಸ್ನೇಹನಾ ಪ್ರೀತೀನಾ ಮತ್ತು ಮಿಂಚಿನ ಓಟ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ‘ಜೂಲಿ– 2’ ಚಿತ್ರದ ಟೀಸರ್ ಯೂಟ್ಯೂಬ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಈ ಚಿತ್ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.