ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳಗ್ರಹಕ್ಕೆ ‘ಇನ್‌ಸೈಟ್‌’

Last Updated 5 ಮೇ 2018, 19:30 IST
ಅಕ್ಷರ ಗಾತ್ರ

ವ್ಯಾಂಡೆನ್‌ಬರ್ಗ್‌ ವಾಯುನೆಲೆ, ಅಮೆರಿಕ (ಎಎಫ್‌ಪಿ): ಮಂಗಳ ಗ್ರಹದ ಕಂಪನಗಳು ಮತ್ತು ತಾಪಮಾನದ ಕುರಿತ ಅಧ್ಯಯನ ನಡೆಸಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಶನಿವಾರ ‘ಇನ್‌ಸೈಟ್‌’ ಗಗನನೌಕೆಯನ್ನು ಉಡಾವಣೆ ಮಾಡಿದೆ.

ಮಂಗಳ ಗ್ರಹದ ಮೇಲ್ಪದರ, ಮಣ್ಣು, ತಾಪಮಾನ ಮುಂತಾದವುಗಳ ಅಧ್ಯಯನಕ್ಕೆ ₹6635 ಕೋಟಿ ವೆಚ್ಚದಲ್ಲಿ ಈ ಯೋಜನೆ ರೂಪಿಸಿದೆ. ಯೋಜನೆಯ ಪ್ರಕಾರ ಎಲ್ಲವೂ ಯಶಸ್ವಿಯಾಗಿ ನಡೆದರೆ, ನವೆಂಬರ್‌ 26ರಂದು ಈ ಗಗನನನೌಕೆ ಮಂಗಳಗ್ರಹದಲ್ಲಿ ಇಳಿಯಲಿದೆ.

ಈ ಗಗನನೌಕೆಯಲ್ಲಿ 16 ಅಡಿ ಆಳದವರೆಗೂ ಮಣ್ಣು ಅಗೆಯುವ ರೋಬೊಟ್ ಮತ್ತು ಕಂಪನಗಳನ್ನು ಅಳೆಯುವ ಸಾಧನ ಸಿಸ್ಮೊಗ್ರಾಫ್ ಇವೆ.

‘ಮಂಗಳನ ಅಂಗಳಕ್ಕೆ ಈ ಮೊದಲೂ ಗಗನನೌಕೆಗಳನ್ನು ಕಳುಹಿಸಲಾಗಿತ್ತು. ಅವು ಕಂಪನಗಳು, ಭುಕುಸಿತ ಮುಂತಾದವುಗಳ ಕುರಿತು ಅಧ್ಯಯನ ನಡೆಸಿವೆ. ಆದರೆ ಕಂಪನಗಳು ಹೇಗೆ ಸಂಭವಿಸುತ್ತವೆ ಎಂಬುದನ್ನು ಅವು ತಿಳಿಸಿರಲಿಲ್ಲ. ಹಾಗಾಗಿ ಈ ನೌಕೆಯನ್ನು ಕಳುಹಿಸಲಾಗಿದೆ’ ಎಂದು ನಾಸಾದ ಮುಖ್ಯ ವಿಜ್ಞಾನಿ ಜಿಮ್ ಗ್ರೀನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT