ಅಂಚೆಯಲ್ಲಿ ಚಲನಚಿತ್ರ ಪ್ರಶಸ್ತಿ!

7

ಅಂಚೆಯಲ್ಲಿ ಚಲನಚಿತ್ರ ಪ್ರಶಸ್ತಿ!

Published:
Updated:

ನವದೆಹಲಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸದ ಚಲನಚಿತ್ರ ಕಲಾವಿದರು ಮತ್ತು ತಂತ್ರಜ್ಞರ ಮನೆ ವಿಳಾಸಕ್ಕೆ ಪ್ರಶಸ್ತಿ ಮತ್ತು ಫಲಕಗಳನ್ನು ಅಂಚೆ ಮೂಲಕ ರವಾನಿಸಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರದಾನ ಮಾಡುವುದು ಸಂಪ್ರದಾಯ. ಆದರೆ, ಈ ಬಾರಿ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಎಲ್ಲರಿಗೂ ರಾಷ್ಟ್ರಪತಿ ಅವುಗಳನ್ನು ಪ್ರದಾನ ಮಾಡುವುದಿಲ್ಲ ಎಂಬ ವಿಷಯ ಬಹಿರಂಗವಾದ ನಂತರ ಆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ರಾಷ್ಟ್ರಪತಿಯವರೇ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ಒತ್ತಾಯಿಸಿ 70 ಮಂದಿ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಆದರೆ, ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಆಗದ ಕಾರಣ 60 ಮಂದಿ ಸಮಾರಂಭಕ್ಕೆ ಗೈರು ಹಾಜರಾಗಿದ್ದರು.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು. ಇದನ್ನು ಪ್ರತಿಭಟಿಸಿ ಅನೇಕರು ಪ್ರಶಸ್ತಿ ಸ್ವೀಕರಿಸಿರಲಿಲ್ಲ.

‘ಪ್ರಶಸ್ತಿಗೆ ಆಯ್ಕೆಯಾದವರು ಸಮಾರಂಭಕ್ಕೆ ಯಾವ ಕಾರಣದಿಂದ ಗೈರು ಹಾಜರಾಗಿದ್ದಾರೆ ಎಂಬ ಮಾಹಿತಿ ಇಲ್ಲ. ಅವರು ಯಾವುದೇ ಕಾರಣದಿಂದ ಗೈರು ಹಾಜರಾಗಿದ್ದರೂ, ಅವರಿಗೆ ಅಂಚೆ ಮೂಲಕ ಪ್ರಶಸ್ತಿಗಳನ್ನು ತಲುಪಿಸುತ್ತೇವೆ’ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry