ಭಾನುವಾರ, ಫೆಬ್ರವರಿ 28, 2021
31 °C

ಸ್ಟಂಪಿಂಗ್‌ನಲ್ಲಿ ದೋನಿ ಅದ್ಭುತ ಚುರುಕು

ಪಿಟಿಐ Updated:

ಅಕ್ಷರ ಗಾತ್ರ : | |

ಸ್ಟಂಪಿಂಗ್‌ನಲ್ಲಿ ದೋನಿ ಅದ್ಭುತ ಚುರುಕು

ಪುಣೆ: ‘ಸ್ಪಿನ್ ಬೌಲರ್‌ಗಳು ದಾಳಿ ನಡೆಸುವ ಸಂದರ್ಭದಲ್ಲಿ ಚುರುಕಿನ ಸ್ಟಂಪಿಂಗ್ ಮಾಡುವುದರಲ್ಲಿ ಮಹೇಂದ್ರ ಸಿಂಗ್ ದೋನಿ ಅವರನ್ನು ಮೀರಿಸುವವರು ಇಲ್ಲ’ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್‌ ಮೈಕ್ ಹಸ್ಸಿ ಅಭಿಪ್ರಾಯಪಟ್ಟಿದ್ದಾರೆ.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಶನಿವಾರ ಸಂಜೆ ಇಲ್ಲಿ ನಡೆದ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಗೆದ್ದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಶನಿವಾರದ ಪಂದ್ಯದಲ್ಲಿ ಹರಭಜನ್ ಸಿಂಗ್‌ ಅವರ ಬೌಲಿಂಗ್‌ನಲ್ಲಿ ಎಬಿ ಡಿವಿಲಿಯರ್ಸ್ ಮತ್ತು ಮುರುಗನ್ ಅಶ್ವಿನ್‌ ಅವರನ್ನು ಮಿಂಚಿನ ವೇಗದಲ್ಲಿ ದೋನಿ ಸ್ಟಂಪಿಂಗ್ ಮಾಡಿದ್ದರು.

‘ವಿಕೆಟ್ ಕೀಪಿಂಗ್‌ನಲ್ಲಿ ದೋನಿ ಅವರ ಚುರುಕುತನ ಅಚ್ಚರಿ ಮೂಡಿಸುವಂಥಾದ್ದು. ಸ್ಟಂಪಿಂಗ್‌ನಲ್ಲಿ ಅವರು ಜಗತ್ತಿನಲ್ಲೇ ಅತ್ಯಂತ ವೇಗದ ಆಟಗಾರ. ಬ್ಯಾಟಿಂಗ್‌ನಲ್ಲೂ ಅವರು ಅಪೂರ್ವ ಸಾಮರ್ಥ್ಯ ಮೆರೆದಿದ್ದಾರೆ. ನಾನು ಕಂಡಂತೆ ಇತ್ತೀಚೆಗೆ ವಿಶ್ವ ಕ್ರಿಕೆಟ್‌ನ ಅತ್ಯಂತ ಪ್ರಭಾವಿ ಬ್ಯಾಟ್ಸ್‌ಮನ್’ ಎಂದು ಹಸ್ಸಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.