ಟ್ವಿಟರ್‌ನಲ್ಲಿ ಅರಳಿದ ‘ಉತ್ತರಾಪ್ರಚಂಡ್’

7

ಟ್ವಿಟರ್‌ನಲ್ಲಿ ಅರಳಿದ ‘ಉತ್ತರಾಪ್ರಚಂಡ್’

Published:
Updated:
ಟ್ವಿಟರ್‌ನಲ್ಲಿ ಅರಳಿದ ‘ಉತ್ತರಾಪ್ರಚಂಡ್’

ಬೆಂಗಳೂರು: ಭಾನುವಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಭಾಷಣದ ವಿಡಿಯೊವೊಂದು ‘ಉತ್ತರಾಪ್ರಚಂಡ್’ ಟ್ರೆಂಡ್‌ ಸೃಷ್ಟಿಸಿದೆ.

ಎಎಪಿ ಮುಖಂಡ ಕೇಜ್ರಿವಾಲ್‌ ‘ಉತ್ತರಾಖಂಡ’ ಶಬ್ದದ ಉಚ್ಚರಣೆಗಾಗಿ ಪಟ್ಟ ಶ್ರಮವನ್ನು ಬಿಂಬಿಸುವಂತಹ ವಿಡಿಯೊ ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಇದೇ ವಿಡಿಯೊ ಬಳಸಿ ಟ್ವೀಟಿಗರು ಕೇಜ್ರಿವಾಲ್‌ ಅವರ ಕಾಲೆಳೆದಿದ್ದಾರೆ. ಭಾಷಣದಲ್ಲಿ ಅವರು ಉತ್ತರಾಖಂಡವನ್ನು ಉತ್ತರಾಪ್ರಚಂಡ್ ಎಂದು ಸಂಬೋಧಿಸಿದ್ದಾರೆ.

‘ಯಾರಾದರೂ ಉತ್ತರಾಪ್ರಚಂಡದಿಂದ ಇದ್ದೀರಾ? ಅಲ್ಲಿಗೆ ಭೇಟಿ ನೀಡಲು ಬಯಸುವಿರಾ?’ ಎಂದು ಟ್ವೀಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.

ವ್ಯಂಗ್ಯ–ಟೀಕೆಗಳ ಜತೆಗೆ ಟ್ರೆಂಡ್‌ ಆಗಿರುವ ಉತ್ತರಾಪ್ರಚಂಡ್‌(#UttaraPrachand) ಹ್ಯಾಷ್‌ ಟ್ಯಾಗ್‌ ಬಳಸಿ 17.6 ಸಾವಿರಕ್ಕೂ ಅಧಿಕ ಟ್ವೀಟ್‌ ಮಾಡಲಾಗಿದೆ.

ಉತ್ತರಾಪ್ರಚಂಡವನ್ನು ಹೊಸ ರಾಷ್ಟ್ರವೆಂದು ಕಲ್ಪಿಸಿಕೊಂಡ ಅನೇಕರು ಅಲ್ಲಿನ ‘ರಾಷ್ಟ್ರಪಿತ’ ಎಂದು ಅಣ್ಣಾ ಹಜಾರೆ ಅವರ ಫೋಟೋ ಪ್ರಕಟಿಸಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಬಂಗಲೆಯ ಮೇಲೆ ಏರಿ ಆ ಪ್ರದೇಶದ ಅಭಿವೃದ್ಧಿಯನ್ನು ನೋಡುತ್ತಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ...

‘ಭ್ರಷ್ಟಾಚಾರ ವಿರೋಧಿ ಮುಖಂಡನೊಂದಿಗೆ ಉತ್ತರಾಪ್ರಚಂಡದ ಪ್ರಧಾನಿ’ ಎಂದು ಲಾಲು ಪ್ರಸಾದ್‌ ಯಾದವ್‌ ಫೋಟೋ ಪ್ರಕಟಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry