ಭಾನುವಾರ, ಜುಲೈ 3, 2022
26 °C

ಮೋದಿ ವಿರುದ್ಧ ರಾಮ್ ಜೇಠ್ಮಲಾನಿ ಗುಡುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ವಿರುದ್ಧ ರಾಮ್ ಜೇಠ್ಮಲಾನಿ ಗುಡುಗುಬೆಂಗಳೂರು: ಮೋದಿ ಮೋಸಗಾರ. ಜನರು ಈ ಮೋಸಗಾರನಿಗೆ ತಕ್ಕ ಪಾಠ ಕಲಿಸಬೇಕು. ಆತನನ್ನು ಬುದ್ದಿ ಕಲಿಸುವ ತನಕ ಹಾಗೂ ನನ್ನ ಕೊನೆ ಉಸಿರು ಇರುವ ತನಕ ಹೋರಾಡುತ್ತೇನೆ ಎಂದು ಮೋದಿ ವಿರುದ್ಧ ರಾಮ್ ಜೇಠ್ಮಲಾನಿ ಗುಡುಗಿದ್ದಾರೆ.

ಬೆಂಗಳೂರಿನ ಪ್ರಸ್‌ಕ್ಲಬ್‌ನಲ್ಲಿ ಆಯೋಜಿಸಿರುವ ಮಾತುಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ್ ಜೇಠ್ಮಲಾನಿ ಮೋದಿಯನ್ನು ನಂಬಿ ಪ್ರಧಾನಿ ಮಾಡಿ ಎಂದು ಹೇಳಿ ಜೀವನದಲ್ಲಿ ದೊಡ್ಡ ತಪ್ಪು ಮಾಡಿ ಮೂರ್ಖನಾಗಿದ್ದೇನೆ ಎಂದರು.

ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆಂದು ಪ್ರಣಾಳಿಕೆಯಲ್ಲಿ ನನ್ನಿಂದ ಬರೆಯಿಸಿಕೊಂಡ ಜನ ಇಂದು ಅದರ ಕುರಿತು ಚಕಾರ ಎತ್ತುತ್ತಿಲ್ಲ. ಈ ಬಗ್ಗೆ ಅಮಿತ್‌ ಶಾ ನಂಥವರು ಇದೊಂದು ನಗೆ ಚಾಟಿಕೆಯ ವಿಷಯ ಎಂದು ಉಡಾಫೆಯ ಮಾತುಗಳನ್ನಾಡುತ್ತಾರೆ. ಇಂಥವರಿಗೆ ಏನೆನ್ನಬೇಕು.?

ಕರ್ನಾಟಕದ ಜನರು ಈ ಚುನಾವಣೆಯಲ್ಲಿ ಮೋದಿಯ ಮೋಡಿ ಮಾತುಗಳಿಗೆ ಮರುಳಾಗದಂತೆ ಎಚ್ಚರಿಕೆ ನೀಡಿದ ಜೇಠ್ಮಲಾನಿ, ನಿಮಗಿಷ್ಟ ಬಂದವರಿಗೆ ಮತ ನೀಡಿ. ಆದರೆ ಮೋದಿಯಂಥ ಕುಕೃತ್ಯಗಾರನ ಮೋಸಗಳನ್ನು ಮರೆಯಬೇಡಿ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.