ಕಾಬೂಲ್: ಅಪಹೃತ ಎಂಜಿನಿಯರ್‌ಗಳ ಪತ್ತೆಗೆ ಬುಡಕಟ್ಟು ನಾಯಕರ ನೆರವು

7

ಕಾಬೂಲ್: ಅಪಹೃತ ಎಂಜಿನಿಯರ್‌ಗಳ ಪತ್ತೆಗೆ ಬುಡಕಟ್ಟು ನಾಯಕರ ನೆರವು

Published:
Updated:
ಕಾಬೂಲ್: ಅಪಹೃತ ಎಂಜಿನಿಯರ್‌ಗಳ ಪತ್ತೆಗೆ ಬುಡಕಟ್ಟು ನಾಯಕರ ನೆರವು

ಕಾಬೂಲ್: ತಾಲಿಬಾನ್ ಉಗ್ರನಿಂದ ಅಪಹರಣಕ್ಕೊಳಗಾದ ಏಳು ಮಂದಿ ಭಾರತೀಯ ಎಂಜಿನಿಯರ್‌ಗಳ ರಕ್ಷಣೆಗೆ ಶ್ರಮಿಸುತ್ತಿರುವ ಅಫ್ಗಾನ್ ಭದ್ರತಾ ಪಡೆಗಳು ಸ್ಥಳೀಯ ಬುಡಕಟ್ಟು ಜನಾಂಗದ ಮುಖಂಡರ ನೆರವು ಯಾಚಿಸಿವೆ.

ಅಪಹರಣಕ್ಕೊಳಗಾದ ಎಂಜಿನಿಯರ್‌ಗಳು ಆರ್‌ಪಿಸಿ ಗ್ರೂಪ್‌ನ ಕೆಇಸಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಚೆಷ್ಮಾ–ಇ–ಶೇರ್‌ ಎಂಬಲ್ಲಿ  ಅಪಹರಣಕ್ಕೊಳಗಾಗಿದ್ದರು.

ಈ ಏಳು ಎಂಜಿನಿಯರ್‌ಗಳ ಜತೆಯಲ್ಲಿ ಅಫ್ಗನ್ ಚಾಲಕ ಕೂಡ ಕಾಣೆಯಾಗಿದ್ದಾನೆ. ಅಫ್ಗಾನಿಸ್ತಾನದ ಪಡೆಗಳು ಹುಡುಕಾಟದ ಪ್ರಯತ್ನ ಮುಂದುವರೆಸಿವೆ. ಈ ಪಡೆಗಳಿಗೆ ಸರ್ಕಾರಿ ಅಧಿಕಾರಿಗಳು, ಸ್ಥಳೀಯ ಬುಡಕಟ್ಟು ಜನಾಂಗದವರು ಸಹಾಯ ಮಾಡುತ್ತಿದ್ದಾರೆ.

ಅಪಹರಣಕ್ಕೊಳಗಾದ ಎಂಜಿನಿಯರ್‌ಗಳನ್ನು ಅದಷ್ಟು ಬೇಗ ಪತ್ತೆ ಹಚ್ಚುವುದಾಗಿ ಗವರ್ನರ್ ಅಬ್ದುಲ್ ನೇಮ್ತಿ ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry